ನ್ಯೂಯಾರ್ಕ್
ಚೀನಾದಲ್ಲಿ ಅತ್ಯಂತ ಪ್ರಮುಖ ಕಂಪನಿಗಳಲ್ಲಿ ಒಂದಾದ ಟಿಕ್ ಟಾಕ್ ಶೀಘ್ರವೇ ಚೀನಾದೊಂದಿಗಿನ ಸಂಪರ್ಕ ಕಡಿದುಕೊಳ್ಳಲಿದ್ದು, ಅಮೆರಿಕಾ ಸಂಸ್ಥೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರರೊಬ್ಬರು ಹೇಳಿದ್ದಾರೆ.
ಟಿಕ್ ಟಾಕ್ ಸಂಸ್ಥೆ ಚೀನಾದ ಮಾತೃಸಂಸ್ಥೆಯನ್ನು ತೊರೆಯಲಿದ್ದು ಶೇ.100 ರಷ್ಟು ಅಮೆರಿಕಾ ಸಂಸ್ಥೆಯಾಗಲಿದ್ದು, ಭಾರತದಲ್ಲಿ ಹೇರಿರುವ ನಿಷೇಧದ ಮಾದರಿಯಿಂದ ತಪ್ಪಿಸಿಕೊಳ್ಳುವ ಬೇಡಿಕೆಗಳನ್ನು ಪೂರೈಸಲಿದೆ ಎಂದು ಶ್ವೇತ ಭವನದಲ್ಲಿ ಟ್ರಂಪ್ ಸಲಹೆಗಾರರು ತಿಳಿಸಿದ್ದಾರೆ.
ಅಮೆರಿಕ ಸಚಿವ ಮೈಕ್ ಪೊಂಪಿಯೋ ಸಲಹೆ ನೀಡಿರುವಂತೆ ಟಿಕ್ ಟಾಕ್ ನ್ನು ನಿಷೇಧ ಮಾಡುವ ಸಂಬಂಧ ಅಮೆರಿಕ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ನಿಷೇಧ ವಿಧಿಸುವ ಬದಲು ಚೀನಾದ ಬೈಟ್ ಡ್ಯಾನ್ಸ್ ಸಂಸ್ಥೆಯಿಂದ ಅದನ್ನು ಹೊರತರುವುದು ಅತ್ಯುತ್ತಮವಾದ ಆಯ್ಕೆ ಎಂದು ರಾಷ್ಟ್ರೀಯ ಆರ್ಥಿಕ ಪರಿಷತ್ ನ ನಿರ್ದೇಶಕ ಕುಡ್ಲೋ ಹೇಳಿದ್ದಾರೆ. ಟಿಕ್ ಟಾಕ್ ಚೀನಾದ ಸಂಪರ್ಕ ಕಡಿದುಕೊಂಡು ಅಮೆರಿಕ ಸಂಸ್ಥೆಯಾದರೆ ಭಾರತ ನಿಷೇಧವನ್ನು ಹಿಂಪಡೆಯುವ ಆಯ್ಕೆಯನ್ನು ಪರಿಗಣಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
