ವಾಷಿಂಗ್ಟನ್:
ಭಾರತದಲ್ಲಿ ಆ್ಯಪ್ ಬ್ಯಾನ್ ನಂತರ ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ಟ್ರಂಪ್ ಆದೇಶ ನೀಡಿದ್ದಾರೆ.
ನಿನ್ನೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ವಿಷಯ ತಿಳಿಸಿದ್ದಾರೆ. ನಮ್ಮ ದೇಶದ ಭದ್ರತೆ ದೃಷ್ಟಿಯಿಂದ ಈ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಈ ಆದೇಶ ಇನ್ನು 45 ದಿನಗಳಲ್ಲಿ ಜಾರಿಗೆ ಬರಲಿದೆ.
ಟಿಕ್ ಟಾಕ್ ನ ಮಾತೃ ಸಂಸ್ಥೆ ಬೈಟ್ ಡಾನ್ಸ್ ಲಿಮಿಟೆಡ್ ಜೊತೆಗೆ ಯಾವುದೇ ರೀತಿಯ ವ್ಯವಹಾರ ನಡೆಸಿದರೂ ಅಮೆರಿಕದ ಕಾನೂನು ಪ್ರಕಾರ ಇನ್ನು ಶಿಕ್ಷೆಯಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
