ವಾಷಿಂಗ್ಟನ್:
ಚೀನಾವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಪರಿಗಣಿಸುವುದಾದರೆ ನಮ್ಮನ್ನು ಕೂಡ ಹಾಗೆಯೇ ಭಾವಿಸಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ದೇಶ ಅಮೇರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಲಾಭ ಪಡೆದುಕೊಂಡಿದೆ. ಉದಾಹರಣೆಗೆ ಅದು ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲಾಗಿದೆ. ಹಾಗಾದರೆ ನಮ್ಮ ದೇಶವನ್ನು ಕೂಡ ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಿ ಎಂದು ಕೊರೋನಾ ವೈರಸ್ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಹೇಳಿದರು.
ಚೀನಾ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಬಿರುದಿನೊಂದಿಗೆ ಚೀನಾ ಲಾಭ ಮಾಡಿಕೊಳ್ಳುತ್ತಿದೆ, ಭಾರತ ಕೂಡ ಅಭಿವೃದ್ಧಿ ಹೊಂದುತ್ತಿರುವ ದೇಶ, ಅಮೆರಿಕ ಕೂಡ ದೊಡ್ಡ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ನಮ್ಮಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ ಎಂದರು.
ವಿಶ್ವ ವ್ಯಾಪಾರ ಸಂಘಟನೆಯಿಂದ ಅಮೆರಿಕ ಲಾಭ ಪಡೆದುಕೊಂಡಿದೆ ಎಂಬ ಮಾತನ್ನು ಒಪ್ಪಿಕೊಂಡ ಅವರು, ಚೀನಾ ದೇಶ ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ ಸೇರಿಕೊಂಡ ಮೇಲೆ ಅಮೆರಿಕ ಸಹಾಯದಿಂದಾಗಿ ಅಭಿವೃದ್ಧಿ ಹೊಂದಲು ಆರಂಭಿಸಿತು ಎಂದರು.
ಚೀನಾದ ಇತಿಹಾಸವನ್ನೊಮ್ಮೆ ನೋಡಿ, ಹತ್ತಾರು ವರ್ಷಗಳವರೆಗೆ ಆರ್ಥಿಕತೆ ಚೇತರಿಕೆ ಕಾಣದೆ ನಲುಗಿ ಹೋಗಿತ್ತು.ವಿಶ್ವ ವಾಣಿಜ್ಯ ಸಂಘಟನೆಗೆ ಸೇರಿದ ನಂತರ ಅಮೇರಿಕ ನೆರವಿನೊಂದಿಗೆ ಅಭಿವೃದ್ಧಿ ಹೊಂದಿದರು. ಆದರೆ ಈಗ ನಮ್ಮ ಮೇಲೆ ಅನುಕಂಪ, ಪ್ರೀತಿ, ಗೌರವಾದರ ತೋರಿಸದಿದ್ದರೆ ಏನು ಮಾಡಲು ಸಾಧ್ಯವಿಲ್ಲ, ನಾವು ಕೊರೋನಾ ಸೋಂಕು ವಿರುದ್ಧ ಗೆಲ್ಲುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








