ಅಮೇರಿಕ : ದೇಶದ ಪ್ರಜೆಗಳ ಉದ್ಯೋಗ ರಕ್ಷಣೆಗೆ ಮುಂದಾದ ಟ್ರಂಪ್…!

ವಾಷಿಂಗ್ಟನ್:

      ಜಗತ್ತಿನಲ್ಲಿ ಕೊರೋನಾ ವೈರಸ್ ಸೋಂಕಿನ ಸಂಕಷ್ಟ ಸಮಯದಲ್ಲಿ ವಿದೇಶಿ ಪ್ರಜೆಗಳಿಂದ ಸ್ಥಳೀಯರಿಗೆ ಆಗುತ್ತಿರುವ ಉದ್ಯೋಗ ನಷ್ಟವನ್ನು ತಪ್ಪಿಸಲು ಅಮೆರಿಕಕ್ಕೆ ವಲಸೆ ಬರುವುದನ್ನು ಭಾಗಶಃ ರದ್ದುಗೊಳಿಸಲಾಗಿದೆಎಂದು ಟ್ರಂಪ್ ತಿಳಿಸಿದ್ದಾರೆ.

      ನಮ್ಮ ದೇಶದ ಪ್ರಜೆಗಳನ್ನು ಮತ್ತು ಅವರ ಉದ್ಯೋಗಗಳನ್ನು ರಕ್ಷಿಸಲು ಅಮೆರಿಕಕ್ಕೆ ಉದ್ಯೋಗ ಅರಸಿ ವಲಸೆ ಬರುವವರಿಗೆ ತಾತ್ಕಾಲಿಕ ನಿರ್ಬಂಧ ಹೇರುವ ಆದೇಶಕ್ಕೆ ನಾನು ಸಹಿ ಹಾಕಿದ್ದೇನೆ. ಇದರಿಂದ ಇನ್ನು ಮುಂದೆ ಅಮೆರಿಕನ್ನರಿಗೆ ಉದ್ಯೋಗಗಳಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಇದರಿಂದ ನಮ್ಮ ದೇಶದ ಆರ್ಥಿಕತೆ ಮತ್ತೆ ಪುನಃ ಚೇತರಿಸಿಕೊಳ್ಗೊಳಲು ಸಾಧ್ಯವಾಗುತ್ತದೆ ಎಂದು  ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

     ಅಮೆರಿಕ ಅಧ್ಯಕ್ಷರ ಈ 60 ದಿನಗಳ ತಾತ್ಕಾಲಿಕ ನಿರ್ಬಂಧದಿಂದಾಗಿ ಅಲ್ಲಿನ ಶಾಶ್ವತ ನೆಲೆಗೆ ಅಥವಾ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಭಾರತ ಸೇರಿದಂತೆ ಬೇರೆ ರಾಷ್ಟ್ರಗಳ ನಾಗರಿಕರಿಗೆ ತೊಂದರೆಯಾಗಲಿದೆ.

     ಅಮೆರಿಕದಲ್ಲಿ ಋತುಮಾನಗಳಲ್ಲಿ ಕೃಷಿ ಕಾರ್ಮಿಕ ಕೆಲಸಗಳಿಗೆ ಹೋಗುವ ಕಾರ್ಮಿಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯ ವಲಯಗಳಲ್ಲಿ ಕೆಲಸ ಮಾಡುವ ಮತ್ತು ಅಮೆರಿಕ ಪ್ರಜೆಗಳ ಸಮೀಪ ಬಂಧುಗಳಿಗೆ ಸಹ ಇದರಿಂದ ಯಾವುದೇ ಸಮಸ್ಯೆಯಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link