ಫೆ.24ಕ್ಕೆ ಟ್ರಂಪ್ ಭಾರತ ಭೇಟಿ..!

ವಾಷಿಂಗ್ಟನ್:

      ಡೊನಾಲ್ಡ್ ಟ್ರಂಪ್ ಅವರು ಫೆ.24 ಮತ್ತು 25ಕ್ಕೆ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬರಲಿದ್ದಾರೆ ಎಂದು ಶ್ವೇತಭವನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

     ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್‌ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.ಭಾರತ ಭೇಟಿಯ ಸಂದರ್ಭದಲ್ಲಿ  ಟ್ರಂಪ್ ಅವರು ಅಹಮದಾಬಾದಿಗೆ ಭೇಟಿ ನೀಡಬಹುದು ಎನ್ನಲಾಗಿದ್ದು .

    ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಅವರು ಬಾಳಿದ ನಾಡಿನಲ್ಲಿ ಡೊನಾಲ್ಡ್‌ ಟ್ರಂಪ್ ಹಾಗೂ ಮೆಲೆನಿಯಾ ಭೇಟಿ ನೀಡಲಿದ್ದಾರೆ ಎಂದು ಶ್ವೇತ ಭವನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಭಾರತ ಭೇಟಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಲಿದ್ದು, ಎರಡು ದೇಶಗಳಲ್ಲಿನ ಜನರಿಗೂ ಅನುಕೂಲಕರವಾಗಲಿದೆ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

    ಕಳೆದ ವರ್ಷ ಅಮೆರಿಕದ ಹೂಸ್ಟನ್‌ನಲ್ಲಿ “ಹೌಡಿ ಮೋದಿ” ಕಾರ್ಯಕ್ರಮದ ರೀತಿಯಲ್ಲಿ ಗುಜರಾತ್‌ನಲ್ಲಿ ಟ್ರಂಪ್‌ಗಾಗಿ ಕೆಮ್‌ ಚೋ ಟ್ರಂಪ್‌ ಎಂಬ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ಇನ್ನು ಪ್ರಧಾನಿ ಮೋದಿ ಹಾಗೂ ಟ್ರಂಪ್‌ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಅಹಮದಾಬಾದ್‌ ಭೇಟಿ ಹೊರತುಪಡಿಸಿ ಉಳಿದ ಕಾರ್ಯಕ್ರಮಗಳ ಕುರಿತು ಶ್ವೇತಭವನ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap