ವಾಷಿಂಗ್ಟಂನ್
ವಿಶ್ವದೆಲ್ಲೆಡೆ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಯಾದ ಊಬರ್ ಆಕಾಶಕ್ಕೂ ತನ್ನ ಜಾಲ ವಿಸ್ತರಿಸಿದೆ. ಕಾರ್ ಟ್ಯಾಕ್ಸಿಗೆ ಹೆಚ್ಚು ಜನಪ್ರಿಯವಾಗಿರುವ ಊಬರ್ ಈಗ ಹೆಲಿ ಟ್ಯಾಕ್ಸಿ ಸೇವೆಯನ್ನೂ ಪ್ರಾರಂಭಿಸಿದೆ.
ಸದ್ಯ ಈ ಸೇವೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ , ಮ್ಯಾನ್‌ಹಟನ್ ನಲ್ಲಿ ಊಬರ್‌ನ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಲಭ್ಯವಿದೆ. ಸೇವೆ ಪ್ರಾರಂಭವಾಗಿ ಕೆಲವು ದಿನಗಳು ಈಗಾಗಲೇ ಕಳೆದಿದ್ದು ಇದು ಗ್ರಾಹಕರ ಮನಗೆದಿದೆ.
ಈ ಮೊದಲು ಕೆಲವು ಆಯ್ದ ಗ್ರಾಹಕರಿಗಷ್ಟೆ ಹೆಲಿಕಾಫ್ಟರ್ ಟ್ಯಾಕ್ಸಿ ಸೇವೆಯನ್ನು ಅಮೆರಿಕದಲ್ಲಿ ಊಬರ್ ನೀಡುತ್ತಿತ್ತು, ಆದರೆ ಗುರುವಾರದಿಂದ ಆ ಸೇವೆಯನ್ನು ಅಮೆರಿಕದ ಎಲ್ಲ ಗ್ರಾಹಕರಿಗೂ ಮುಕ್ತ ಮಾಡಲಾಗಿದೆ. ಹೆಲಿಕಾಫ್ಟರ್ ಟ್ಯಾಕ್ಸಿ ಬಳಸಲಿಚ್ಛಿಸುವ, ಜೇಬಿನಲ್ಲಿ ದುಡ್ಡು ಇರುವ ಯಾರು ಬೇಕಾದರೂ ಹೆಲಿಕಾಫ್ಟರ್ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ. ಮತ್ತು ಈ ಸೇವೆಯನ್ನು ಶೀಘ್ರದಲ್ಲಿಯೇ ಏಷ್ಯಾದ ದೇಶಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
