ವಾಷಿಂಗ್ಟನ್:
ಅಮೆರಿಕ ಸರ್ಕಾರದಿಂದ ನೀಡಲ್ಪಡುವ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಕಳೆದ ವಾರ ಗಣನೀಯ ಏರಿಕೆಯಾಗಿದೆ ಎಂದು ಅಮೆರಿಕ ಕಾರ್ಮಿಕ ಅಂಕಿ-ಅಂಶ ಇಲಾಖೆ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಕಳೆದ ವಾರ ಅಮೆರಿಕದಲ್ಲಿ ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ 6,000 ದಷ್ಟು ಏರಿಕೆಯಾಗಿದ್ದು, 211,000ಕ್ಕೆ ತಲುಪಿದೆ ಎಂದು ಇಲಾಖೆ ತಿಳಿಸಿದೆ.