ವಾಷಿಂಗ್ಟನ್
ಜಾಗತಿಕವಾಗಿ ಒಬ್ಬಂಟಿಯಾಗಿರುವ ಪಾಕಿಸ್ಥಾನಕ್ಕೆ ಈಗ ಮತ್ತೊಂದು ಭಾರಿ ಹೊಡೆತ ಬಿದ್ದಂತಾಗಿದೆ ಪಾಕಿಸ್ತಾನದ ವಿದೇಶಿ ವಿಮಾನಯಾನ ಕ್ಷೇತ್ರ ಇಷ್ಟು ದಿನ ಅಷ್ಟೊ ಇಷ್ಟೊ ಉಸಿರಾಡುತ್ತಿತ್ತು ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ .ಅದೇನೆಂದರೆ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ.
ಪಾಕಿಸ್ತಾನ ಪೈಲಟ್‌ಗಳ ಪ್ರಮಾಣಪತ್ರದ ಬಗ್ಗೆ ಅಮೆರಿಕ ವಿಮಾನಯಾನ ಪ್ರಾಧಿಕಾರ ಸಾಕಷ್ಟು ಸಂದೇಹ ಹೊಂದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ .ಯುರೋಪಿಯನ್ ಯೂನಿಯನ್ ಆವಿಯೇಷನ್ ಸೇಫ್ಟಿ ಏಜೆನ್ಸಿಯು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮುಂದಿನ ಆರು ತಿಂಗಳಿಗೆ ನಿಷೇಧಿಸಿದೆ. ಪಾಕಿಸ್ತಾನ ಪೈಲಟ್‌ಗಳಿಗೆ ನೀಡಿರುವ ತರಬೇತಿ ಪ್ರಮಾಣ ಪತ್ರದ ಕುರಿತು ಸಾಕಷ್ಟು ಅನುಮಾನವನ್ನು ಅಮೆರಿಕ ವ್ಯಕ್ತಪಡಿಸಿದೆ.
ಅಮೆರಿಕ ವಿಮಾನಗಳ ಹಾರಾಟ ನಿಷೇಧಿಸಿರುವ ಕುರಿತು ಪಾಕಿಸ್ತಾನ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ವಿಮಾನ ಅಪಘಾತ ಸಂಭವಿಸಿ 97 ಮಂದಿ ಮೃತಪಟ್ಟಿದ್ದರು. ಬಳಿಕ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಪೈಲಟ್ ಕೊರೊನಾ ವಿಚಾರವಾಗಿ ಮಾತನಾಡುತ್ತಿದ್ದರು, ಹೀಗಾಗಿ ಅವರ ಯೋಚನೆ ವಿಮಾನದ ಕಡೆ ಇರಲಿಲ್ಲ ಎಂಬುದು ಸ್ಪಷ್ಟವಾದ ಕಾರಣ ಸಧ್ಯಕ್ಕಂತೂ ಪಾಕಿಸ್ತಾನ ವಿಮಾನ ಹಾರಾಟ ಅವಕಶ್ಯಕತೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ