ವೆನೆಜುವೆಲಾ
ಹೆಸರು ಕೇಳಿದರೆ ವಿಶ್ವದ ದೊಡಣ್ಣ ಅಮೇರಿಕ ಕೂಡ ಒಮ್ಮೆ ತಿರುಗಿನೊಡಿಕೊಳ್ಳವಷ್ಟು ಸುಭದ್ರವಾಗಿದ್ದ ದೇಶ ಇಂದು ಅತ್ಯಂತ ದಯನೀಯ ಸ್ಥಿತಿಗೆ ತಲುಪಿದೆ .
ಬಹುತೇಕ ದಕ್ಷಿಣ ಅಮೆರಿಕದ ಅಧ್ಯಕ್ಷರು ನಿಗೂಢ ಸಾವನ್ನಪ್ಪಿದವರೇ. ವೆನೆಜುವೆಲಾದ ಅಧ್ಯಕ್ಷ ಚಾವೇಸ್ ಕೂಡ ಅದೇ ದಾರಿಯಲ್ಲಿ ಸವೆದು ಹೋದ ನಾಯಕ. ಆತನ ಅಕಾಲಿಕ ಮರಣದ ನಂತರ ಆತನ ಪರಮಾಪ್ತ ನಿಕೋಲಸ್ ಮದುರೋ ವೆನೆಜುವೆಲಾದ ಆಡಳಿತ ಚುಕ್ಕಾಣಿ ಹಿಡಿದರು .
ಅಂದಿನಿಂದ ವೆನೆಜುವೆಲಾದ ಜನರ ಬದುಕು ಅತ್ಯಂತ ದುರ್ಭರವಾಗಿ ಹೋಗಿದೆ. ಚಾವೇಸ್ ಇದ್ದಾಗ ಎಲ್ಲವೂ ತುಂಬಾ ಚೆನ್ನಾಗಿತ್ತು ಎನ್ನುವ ಹಾಗೇನು ಇರಲಿಲ್ಲ. ಅಂದರೆ ಇಂದಿನ ಸ್ಥಿತಿಗಿಂತ ಚೆನ್ನಾಗಿತ್ತು. ಇವತ್ತು ವೆನೆಜುವೆಲಾ ಆರ್ಥಿಕವಾಗಿ ದಿವಾಳಿಯಾಗಿ ಹೋಗಿದೆ. ಅದರ ಫೋರಕ್ಸ್ ರಿಸರ್ವ್ ಕೇವಲ 10 ಬಿಲಿಯನ್ ಡಾಲರ್ ಗಳಿಗೆ ಕುಸಿದಿದೆ. ತನ್ನ ಪ್ರಜೆಗಳಿಗೆ ಬೇಕಾದ ಅತಿ ಅವಶ್ಯಕ ಆಹಾರ ಪದಾರ್ಥ, ಔಷದಿ ಕೊಂಡು ಅದಕ್ಕೆ ಹಣ ಪಾವತಿಸಲು ಆಗದ ಸ್ಥಿತಿ ಅದು ತಲುಪಿದೆ.
ಹತ್ತರಲ್ಲಿ ಏಳು ಬಿಲಿಯನ್ ಗೋಲ್ಡ್ ನಲ್ಲಿದೆ. ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಔಷದ ಅಥವಾ ಆಹಾರಕ್ಕೆ ತನ್ನ ಬಂಗಾರವನ್ನು ಹಣಕ್ಕೆ ಮಾರಬೇಕಾದ ಅಥವಾ ಒತ್ತೆ ಇಡಬೇಕಾದ ಸಂಕಷ್ಟದಲ್ಲಿದೆ. ವೆನೆಜುವೆಲಾ ಹಣ ತನ್ನ ಮೌಲ್ಯ ಕಳೆದುಕೊಂಡು ಪೇಪರ್ ಅನ್ನುವ ಸ್ಥಿತಿ ತಲುಪಿದೆ.
ಆರ್ಥಿಕವಾಗಿ ಕುಗ್ಗಿ ಹೋಗಿರುವ ದೇಶದಲ್ಲಿ ಕಾನೂನು ಮತ್ತು ವ್ಯವಸ್ಥೆಯೂ ಕುಸಿದರೆ ಏನಾಗಬಹುದು ಎನ್ನುವುದನ್ನು ಇಂದು ನಾವು ವೆನೆಜುವೆಲಾದಲ್ಲಿ ನೇರವಾಗಿ ಕಾಣುತ್ತಿದ್ದೇವೆ. ಇವತ್ತಿಗೆ ವೆನಿಜುಯೆಲಾ ದಲ್ಲಿ ಪ್ರೆಸಿಡೆಂಟ್ ಅಥವಾ ದೇಶದ ಮುಖ್ಯಸ್ಥ ಯಾರು? ಎನ್ನುವ ಪ್ರಶ್ನೆ ನೀವು ಕೇಳಿದರೆ ಉತ್ತರ ಯಾರೂ ಕೂಡ ನಿಖರವಾಗಿ ಹೇಳಲಾಗದ ಪರಿಸ್ಥಿತಿ ಇದೆ.
ವೆನೆಜುವೆಲಾದ ಹಣದುಬ್ಬರ ಪ್ರಮಾಣ 720 ಪ್ರತಿಶತ ಇದೆ ಇನ್ನು ಭಾರತದ ಹಣದುಬ್ಬರ ಈ ವರ್ಷ 3.8 ಪ್ರತಿಶತದಲ್ಲಿದೆ. ಯುರೋ ವಲಯದಲ್ಲಿ ಡೆಫ್ಲೇಷನ್ ಅಥವಾ ನೆಗೆಟಿವ್ ಇನ್ಫ್ಲೇಶನ್ ೦.2 ಪ್ರತಿಶತದಷ್ಟು ಇದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








