ನಾರ್ಥ್ ಸೌಂಡ್
ಕ್ರಿಕೆಟ್ ಪುಟಗಳಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ 318 ರನ್ ಗಳಿಂದ ದಾಖಲೆಯ ಜಯ ಸಾಧಿಸುತ್ತಿದ್ದಂತೆ ವಿರಾಟ್ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ತಮ್ಮ ನಾಯಕತ್ವದಲ್ಲಿ 27 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಸಾಧನೆ ಮಾಡಲು ಕೊಹ್ಲಿ ಒಟ್ಟು 47 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಧೋನಿ 60 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಧೋನಿ ತಮ್ಮ ನಾಯಕತ್ವದಲ್ಲಿ ಶೇ. 45 ರಷ್ಟರ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದಾರೆ. ಒಟ್ಟು 60 ಪಂದ್ಯಗಳಲ್ಲಿ 27 ರಲ್ಲಿ ಜಯ, 18ರಲ್ಲಿ ಸೋಲು ಮತ್ತು 15 ಡ್ರಾ ಆಗಿವೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 55.31 ಸರಾಸರಿಯಲ್ಲಿ ಯಶ ಕಂಡಿದೆ. ಒಟ್ಟು 47 ಪಂದ್ಯಗಳಲ್ಲಿ 27 ಜಯ, 10 ಸೋಲು ಮತ್ತು 10 ರಲ್ಲಿ ಡ್ರಾ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ