ವಾಷಿಂಗ್ಟನ್:
ಭಾರೀ ಮಳೆಯಿಂದಾಗಿ ಅಮೇರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ ಯಲ್ಲಿ ಪ್ರವಾಹ ಪರಿಸ್ಥತಿ ಉಂಟಾಗಿದ್ದು, ಇದರಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ.
ಈ ಪ್ರವಾಹ ಪರಿಸ್ಥತಿಯನ್ನು ಎದುರಿಸಲು ಅಮೇರಿಕದ ರಾಷ್ಟ್ರೀಯ ಹವಾಮಾನ ವಿಭಾಗವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ.
ಮೇರಿಲ್ಯಾಂಡ್ನ ರಾಜ್ಯದ ಫ್ರೆಡೆರಿಕ್ ಬಳಿ ಮತ್ತು ವರ್ಜೀನಿಯಾದ ಆರ್ಲಿಂಗ್ಟನ್ ಬಳಿ ಸುಮಾರು 4.5 ಇಂಚುಗಳು ಮತ್ತು ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಸುಮಾರು 6.3 ಇಂಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಕೋಡಿ ಲೆಡ್ಬೆಟರ್ ತಿಳಿಸಿದ್ದಾರೆ.
ವಾಷಿಂಗ್ಟನ್ ಡಿ.ಸಿ ಮತ್ತು ಮೇರಿಲ್ಯಾಂಡ್ನ ಮಾಂಟ್ಗೊಮೆರಿ ಕೌಂಟಿಯ ಕೆಲವು ಭಾಗಗಳಲ್ಲಿ ಉಂಟಾಗಿರುವ ಪ್ರವಾಹದಿಂದ ತಪ್ಪಿಸಿಕೊಳ್ಳಲು ರಕ್ಷಣಾ ಪಡೆಗಳು ಸಿಕ್ಕಿಬಿದ್ದ ವಾಹನ ಚಾಲಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.ಬೀದಿಗಳು ನೀರಿನಿಂದ ತುಂಬಿಹೋಗಿದ್ದು ಜನರ ಮನೆಗಳಿಗು ನೀರು ನುಗ್ಗಿದೆ ಎಂದು ವರದಿಯಾಗಿದೆ. ಮೆಟ್ರೋ ನಿಲ್ದಾಣದ ಮೇಲ್ಚಾವಣಿ ಯಿಂದಲೂ ತುಂತುರು ಮಳೆ ಸುರಿಯಿದ್ದು. ಶ್ವೇತಭವನದ ನೆಲಮಾಳಿಗೆಯನ್ನು ಸಹ ನೀರು ನುಗ್ಗಿದೆ ಎಂದು ವರದಿಯಾಗಿದೆ.