ಕಳೆದ 8 ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 50 % ತಗ್ಗಿದೆ : ಟ್ರಂಪ್

ವಾಷಿಂಗ್ಟನ್

    ನಮ್ಮ ಮಿತ್ರರಾಷ್ಟ್ರ ಭಾರತವನ್ನೊಳಗೊಂಡಂತೆ 9 ರಾಷ್ಟ್ರಗಳಿಗಿಂತಲೂ ಹೆಚ್ಚಾಗಿ ಕೊರೋನಾ ವೈರಸ್ ಪರೀಕ್ಷೆ ನಡೆಸಿರುವುದು ನಾವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

     ಕೊರೋನಾ ವಿರುದ್ಧದ ಹೋರಾಟ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ದೇಶದಲ್ಲಿ 4.18 ಮಿಲಿಯನ್’ರಷ್ಟು ಜನರನ್ನು ವೈರಸ್ ಪರೀಕ್ಷೆ ನಡೆಸಿ ವಿಶ್ವದಲ್ಲಿಯೇ ಎಲ್ಲೂ ನಡೆಯದ ದಾಖಲೆಯಾಗಿದೆ. ಪ್ರಾನ್ಸ್, ಬ್ರಿಟನ್, ದಕ್ಷಣ ಕೊರಿಯಾ, ಜಪಾನ್, ಸಿಂಗಾಪುರ, ಭಾರತ, ಆಸ್ಟ್ರೇಲಿಯಾ, ಸ್ವೀಡನ್ ಹಾಗೂ ಕೆನಡಾ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿಯೇ ಕೊರೋನಾ ಕುರಿತು ಹೆಚ್ಚು ಪರೀಕ್ಷೆಗಳು ನಡೆದಿವೆ ಎಂದಿದ್ದಾರೆ. 

    8 ದಿನಗಳ ಅವಧಿಯಲ್ಲಿ ಅಮೆರಿಕಾದಲ್ಲಿ ಶೇ.50ರಷ್ಟು ಹೊಸ ಪ್ರಕರಣಗಳು ಕಡಿಮೆಯಾಗಿವೆ. ಇದು ದೊಡ್ಡ ಸಾಧನೆಯೇ . ಇಟಲಿ ಹಾಗೂ ಸ್ಪೇನ್ ರಾಷ್ಟ್ರಗಳಲ್ಲಿ ಇಡೀ ದೇಶವನ್ನೇ ಬಂದ್ ಮಾಡಲಾಗಿದ್ದು, ದೊಡ್ಡ ಮೊತ್ತವನ್ನೇ ತೆರುತ್ತಿದೆ. ನಾವು ಕೂಡಲೇ ಕ್ರಮಗಳನ್ನು ಕೈಗೊಳ್ಳದೇ ಹೋಗಿದ್ದರೆ ಇನ್ನೂ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದರು. ಇದೀಗ ಅಮೆರಿಕಾದಲ್ಲಿರುವ ಶೇ.95ರಷ್ಟು ಜನರು ಮನೆಗಳ ಒಳಗೇ ಇದ್ದಾರೆ. 60,000 ಸಾವಿನ ಸಂಖ್ಯೆ ತಲುಪಬೇಕಿದ್ದದ್ದು 40,000 ತಲುಪಿದೆ. ಪ್ರರಿಸ್ಥಿತಿ ಹೀಗೆಯೇ ಸುಧಾರಿಸುತ್ತದೆ.

    ನಮ್ಮ ಕಠಿಣ ಕ್ರಮಗಳು ಕೆಲಸ ಮಾಡುತ್ತಿವೆ. ನಿಸ್ವಾರ್ಥ ಸೇವೆ ಮಾಡುತ್ತಿರುವ ಅಮೆರಿಕಾ ಜನತೆಗೆ ಧನ್ಯವಾದಗಳನ್ನು ಹೇಳಲುತ್ತೇನೆ. ಅಸಂಖ್ಯಾತ ಜನರ ಪ್ರಾಣಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ರಾಷ್ಟ್ರ ಸುರಕ್ಷಿತವಾಗಿರಲಿದೆ. ಯಾವುದನ್ನ ಬಂದ್ ಮಾಡುವುದು ನಮಗಿಷ್ಟವಿಲ್ಲ. ವ್ಯವಸ್ಥಿತ ರೀತಿಯಲ್ಲಿ ಎಲ್ಲವನ್ನೂ ನಾವು ನಿಭಾಯಿಸುತ್ತೇವೆ. 

    ಆಡಳಿತ ಮಂಡಳಿಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವರಿಗೆ ಎಷ್ಟೇ ಕೆಲಸ ಮಾಡಿದರೂ ಅವರಿಗೆ ತೃಪ್ತಿಯಾಗುವಿದಿಲ್ಲ. ನಾಳೆಯ ಗುಣಮುಖದ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ. ಕೆಲವರಿಗೆ ದೂರು ಹೇಳುವುದಕ್ಕಾಗಿಯೇ ಸಮಸ್ಯೆಗಳನ್ನು ಹುಡುಕುತ್ತಿರುತ್ತಾರೆಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap