ಇಸ್ಲಾಮಾಬಾದ್
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಪಡಿಸಿದ ನಂತರದಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳುವುದು ಒಳಿತು ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ತಿಳಿಸಿದ್ದಾರೆ.
ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಚೌಧರಿ, ಭಾರತೀಯ ರಾಯಭಾರಿ ಏಕೆ ಇಲ್ಲಿದ್ದಾರೆ; ನಾವು ಯಾಕೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುತ್ತಿಲ್ಲ. ಉಭಯ ದೇಶಗಳ ನಡುವೆ ರಾಜತಾಂತ್ರಿಕತೆ ಇಲ್ಲದಿದ್ದಾಗ, ನಮ್ಮ ರಾಯಭಾರಿ ಅಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ”
ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ಸ್ವಭಾವತಹ ಒಳ್ಳೆಯ ವ್ಯಕ್ತಿ, ಆದರೆ ಅವರು “ಫ್ಯಾಸಿಸ್ಟ್ ಆಡಳಿತವನ್ನು ಪ್ರತಿನಿಧಿಸುತ್ತಾರೆ” ಎಂದು ಹೇಳಿದರು.”ಕಾಶ್ಮೀರವನ್ನು ಮತ್ತೊಂದು ಪ್ಯಾಲೆಸ್ಟೈನ್ ಆಗಲು ಪಾಕಿಸ್ತಾನ ಬಿಡುವುದಿಲ್ಲ” ಎಂದು ಚೌಧರಿ ಹೇಳಿದರು.
“ಪಾಕಿಸ್ತಾನ ಯುದ್ಧದ ಬಗ್ಗೆ ಭಯಪಡಬಾರದು ಏಕೆಂದರೆ ಗೌರವವು ಎಲ್ಲಕ್ಕಿಂತ ಮುಖ್ಯವಾಗಿದೆ” ಎಂದು ಹೇಳಿದ್ದಾರೆ. ಅಪಮಾನ ಮತ್ತು ಯುದ್ಧದ ನಡುವೆ ನಾವು ಯಾವುದನ್ನು ಆರಿಸಬೇಕು. ಯುದ್ಧಗಳು ಗೌರವಕ್ಕಾಗಿ ನಡೆಯುತ್ತವೆ. ಆದ್ದರಿಂದ ನಾವು ನಮ್ಮ ಗೌರವ ಕಾಪಾಡಿಕೊಳ್ಳಲು ಯಾವತ್ತು ಹೆದರಬಾರದು. ”
ಇನ್ನು ಪಾಕ್ ಆಕ್ರಮಿತ ಕಾಶ್ಮೀರದ ನಾಯಕರು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದರು ಎಂದು ವರದಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ