HCQ ಮಾತ್ರೆಗಳು ಕೊರೋನಾ ಸಾವು ತಡೆಯುವುದಿಲ್ಲ:ಡಾ.ಸೌಮ್ಯ ಸ್ವಾಮಿನಾಥನ್

ಲಂಡನ್:

      ಹೊಸ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿ ಆಸ್ಪತ್ರೆಯಲ್ಲಿರುವವರನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಸಾವಿನಿಂದ ಕಾಪಾಡುವುದಿಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ. 

     ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಈ ಬಗ್ಗೆ ಮಾತನಾಡಿದ್ದು, ಕೋವಿಡ್-19 ರಿಂದ ಪಾರಾಗುವುದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನ ಪಾತ್ರ ಅಗ್ರಸ್ಥಾನದಲ್ಲಿಯೇ ಇದೆ. ಈ ಕುರಿತು ಕ್ಲಿನಿಕಲ್ ಟ್ರೈಲ್ಸ್ ಮುಂದುವರೆದಿದೆ ಎಂದಿದ್ದಾರೆ. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್ ಅವರು, ರೋಗದ ಪ್ರಾರಂಭದಲ್ಲಿ ಅದರ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ತಡೆಗಟ್ಟುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನ ಪಾತ್ರದ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಈ ವರೆಗೂ ಗೊತ್ತಿಲ್ಲ, ಹೆಚ್ಚಿನ ಪ್ರಯೋಗಗಳು ನಡೆದು ಡಾಟಾ ಸಿಗಬೇಕಿದೆ ಎಂದು ಹೇಳಿದ್ದು, ಡಬ್ಲ್ಯು ಹೆಚ್ ಒ ನಡೆಸದೇ ಇರುವ ಪ್ರಯೋಗಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.

     ಹೈಡ್ರಾಕ್ಸಿಕ್ಲೊರೋಕ್ವಿನ್ ನ ತನ್ನ ಟ್ರಯಲ್ ಟೆಸ್ಟಿಂಗ್ ನಿಂದ ಕೈಬಿಡುತ್ತಿರುವುದಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ವಾರ ಹೇಳಿತ್ತು. ಈ ವೇಳೆ ಬ್ರಿಟನ್ ಹಾಗೂ ಇನ್ನಿತರ ಪ್ರತ್ಯೇಕ ವಿಶ್ಲೇಷಣೆಗಳ ಸಾಕ್ಷ್ಯಗಳನ್ನು ಈ ಔಷಧದ ಕುರಿತು ನೀಡಿತ್ತು. ಕೋವಿಡ್-19 ಚಿಕಿತ್ಸೆಗೆ ಎಬೋಲಾ ಹಾಗೂ ಏಡ್ಸ್ ಗೆ ನೀಡಲಾಗುತ್ತಿದ್ದ ಚಿಕಿತ್ಸೆಗಳ ಬಗ್ಗೆ ಪರೀಕ್ಷೆಗಳು ಈ ಹಿಂದಿನಂತೆಯೇ ಮುಂದುವರೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap