ಬ್ರಿಟನ್ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ ಪ್ರಿನ್ಸ್ ಹ್ಯಾರಿ..!

ಲಂಡನ್:

   ಸೂರ್ಯ ಮುಳುಗದ ಸಾನ್ರಾಜ್ಯ ಕಟ್ಟಿದ್ದ ಬ್ರಿಟನ್ ರಾಜಮನೆತನದ ಮುಂದಿನ ಯುವರಾಜ ಎಂದೇ ಹೇಳಲಾಗಿದ್ದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

   ಈ ಕುರಿತಂತೆ ಬಕಿಂಗ್ ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದ್ದು, ‘ರಾಜ ಮನೆತನದ ಈ ದಂಪತಿ ಇನ್ನು ಅವರ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಮತ್ತು 2020ರ ವಸಂತ ಋತುವಿನಿಂದಲೇ ಅರಮನೆ ಹೊಸ ವ್ಯವಸ್ಥೆಗಳು ಜಾರಿಯಾಗಲಿವೆ ಎಂದು ತಿಳಿಸಿದೆ.

   ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್​ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜ ಮನೆತನಕ್ಕೆ ಇರುವ ಗೌರವಗಳಾದ ಘನತೆವೆತ್ತ ರಾಜ ಮತ್ತು ರಾಣಿ ಎಂಬ ಪದನಾಮಗಳನ್ನು ಬೇಡ ಎಂದಿದ್ದರು. ಪ್ರಿನ್ಸ್ ಚಾರ್ಲ್ಸ್ ಅವರೊಂದಿಗೆ ವಿಚ್ಚೇದನ ಪಡೆದಿದ್ದ ಹ್ಯಾರಿ ಅವರ ತಾಯಿ ಡಯನಾ ಅವರೂ ತಮ್ಮ ಹೆಸರಿನೊಂದಿಗಿದ್ದ ಘನತೆವೆತ್ತ ಎಂಬ ಪದನಾಮವನ್ನು ತೆಗೆದುಹಾಕಿದ್ದರು. ಆದರೆ ಹ್ಯಾರಿ ಅವರು ರಾಜ ಮನೆತನದ ವೈಭೋಗಗಳನ್ನು ತೊರೆದರೂ ಅವರು ಬ್ರಿಟಿಷ್​ ಸಿಂಹಾಸನದ ದೊರೆಯಾಗಿರಲಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link