ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲು

ಬೀಜಿಂಗ್:
          ಭಾರತೀಯನಂತೆ ಕತೆ ಕಟ್ಟಿ ಭಾರತೀಯ ಬ್ಯಾಂಕ್ ಗಳಿಗೆ ಕೋಟ್ಯಾಂತರ ವಂಚನೆ ಮಾಡಿ ದೇಶವನ್ನು ಬಿಟ್ಟು ವಿದೇಶಕ್ಕೆ ಪರಾರಿಯಾಗಿರುವ  ನೀರವ್ ಮೋದಿ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದೆ ಎಂದು ಮಾದ್ಯಮ ವರದಿಯೊಂದು ಹೇಳಿದೆ.
           ನೀರವ್ ಮೋದಿಗೆ ಸೇರಿದ್ದ ಎರಡು ಸಂಸ್ಥೆಗಳು ಯೂನಿಯನ್ ಬ್ಯಾಂಕ್ ಗೆ 5.49 ದಶಲಕ್ಷ ಡಾಲರ್ ಮೊತ್ತಕ್ಕೆ ಹೆಚ್ಚಿನ ಸಾಲವನ್ನು ಮರುಪಾವತಿಸದೆ ವಂಚಿಸಿದೆ ಎಂದು ಆರೋಪಿಸಿ ಬ್ಯಾಂಕ್ ಹಾಂಗ್ ಕಾಂಗ್ ನ್ಯಾಯಾಲಯದ ಮೊರೆ ಹೋಗಿದೆ.
ಮುಂಬೈ ಮೂಲದ ವಜ್ರದ ವ್ಯಾಪಾರಿ ಈರವ್ ಮೋದಿ ಭಾರತದ ಅತಿ ದೊಡ್ಡ ಹಣಕಾಸು ಅವ್ಯವಹಾರದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
           ಈತ ಅಕ್ಟೋಬರ್ 2011 ರಲ್ಲಿ ಫೈರ್ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ   ನವೆಂಬರ್ 2011 ರಲ್ಲಿ ಫೈರ್ಸ್ಟಾರ್ ಡೈಮಂಡ್ ಸಂಸ್ಥೆಗಳ ಹೆಸರಿನಲ್ಲಿ ಪಡೆದ ಸಾಲಕ್ಕೆ ಖಾತರಿ ನೀಡಿದ್ದರು.ಎಂದು ಬುಧವಾರ ಹಾಂಗ್ ಕಾಂಗ್ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಬ್ಯಾಂಕ್ ತಿಳಿಸಿದೆ ಎನ್ನುವುದಾಗಿ ಅಲ್ಲಿನ ಪತ್ರಿಕೆ  ವರದಿ ಮಾಡಿದೆ.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link