ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಷಾ ಮಹಮ್ಮೂದ್ ಖುರೇಷಿ ಆರೋಪಿಸಿದ್ದಾರೆ, ಪಾಕಿಸ್ತಾನದ ಪೇಶಾವರ ಮಿಲಿಟರಿ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. 2014ರಲ್ಲಿ ಪೇಶಾವರದ ಶಾಲೆಯೊಂದರ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಖುರೇಷಿ ಗಂಭೀರ ಆರೋಪ ಮಾಡಿದರು. ಈ ಘಟನೆಯಲ್ಲಿ ಸುಮಾರು 150 ಮಕ್ಕಳು ದಾರುಣವಾಗಿ ಸಾವಿಗೀಡಾಗಿದ್ದರು. ಈ ಘಟನೆಯನ್ನು ಪಾಕ್ ಇಂದಿಗೂ ಮರೆತಿಲ್ಲ. ಈ ದಾಳಿಯಲ್ಲಿ ಭಾಗಿಯಾದ ಉಗ್ರರಿಗೆ ಭಾರತದಿಂದ ಬೆಂಬಲ ದೊರಕಿದೆ ಎಂದು ಖುರೇಷಿ ಆರೋಪಿಸಿದರು.
ನ್ಯೂಯಾರ್ಕ್ನಲ್ಲಿ ನಡೆಯ ಬೇಕಿದ್ದ ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಮುರಿದುಬೀಳಲು ಭಾರತವೇ ಕಾರಣ ಎಂದು ಆರೋಪಿಸಿರುವ ಅವರು ಭಾರತ ಶಾಂತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಾಲಿಶವಾಗಿ ದೂರಿದ್ದಾರೆ.
ನಮ್ಮ ಜೊತೆ ಮಾತುಕತೆಯನ್ನು ಭಾರತ ಹಲವು ಭಾರಿ ಹಿಂತೆಗೆದುಕೊಂಡಿದೆ, ಶಾಂತಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಭಾರತ ಆಯ್ದುಕೊಂಡಿದೆ. ಕಾಶ್ಮೀರ ವಿಮೋಚನಾ ಕಾರ್ಯಕರ್ತನ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೇ ಎಂದು ಭಾರತ ಪಾಕ್ನೊಂದಿಗಿನ ಮಾತುಕತೆಯನ್ನು ರದ್ದುಪಡಿಸುತ್ತಿದೆ ಎಂದು ಖುರೇಷಿ ಆರೋಪಿಸಿದರು.