ರಾಹುಲ್ ಗಾಂಧಿಗೆ ಪಾಕ್ ಸಚಿವ ಬೆಂಬಲ

ಇಸ್ಲಮಾಬಾದ್‌: 

      ಮಾತುಕತೆಗೆ ಅನುಮತಿ ಸಿಗದೆ ಪಾಕಿಸ್ತಾನ ಕಂಗೆಟಂತಿದೆ ಆ ದೇಶ ತಾನು ದಿವಾಯಾದರೆ ಗತಿ ಏನು ಎಂದು ಯೋಚಿಸುವ ಬದಲು ಪಕ್ಕದ ದೇಶದಲ್ಲಿ ಏನಾಗುತ್ತಿದೆ ಎಂದು ಇಣುಕುವುದನ್ನೆ ರೂಢಿಸಿಕೊಂಡಂತೆ ಇದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ಟ್ವೀಟ್ ಮೂಲಕ ಶ್ರೀ ರಾಹುಲ್ ಗಾಂಧಿ ಅವರು ನಿಮ್ಮ ಮುಂದಿನ ಪ್ರಧಾನಿ. ಪ್ರಧಾನಿ ಮೋದಿಯು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‍ ಅವರನ್ನು ಕಂಡು ಹೆದರಿದ್ದಾರೆ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

      ಟ್ವೀಟ್ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮಲಿಕ್, ನನ್ನ ಕೆಲ ಟ್ವೀಟ್‍ಗಳು ಭಾರತವನ್ನು ಅಲುಗಾಡುವಂತೆ ಮಾಡಿದ್ದು ನನಗೆ ಸಂತಸ ತಂದಿದೆ. ನಾನು ಟ್ವೀಟ್ ಮಾಡುವ ಮೊದಲು ಪ್ರಧಾನಿ ಮೋದಿ ಹಾಗೂ ಆರ್‌‌ಎಸ್‍ಎಸ್ ಕೃತ್ಯಗಳ ಬಗ್ಗೆ ಕೆಲ ಭಾರತೀಯರಿಗೆ ಅರಿವೆ ಇರಲಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಭಾರತದ ರಕ್ಷಣಾ ಸೇನೆ ಮುಖ್ಯಸ್ಥ ಬಿಪಿನ್ ರಾವತ್‍ರನ್ನು ಟಾರ್ಗೆಟ್ ಮಾಡಿದ್ದ ಮಲಿಕ್, ಬಿಪಿನ್ ಒಬ್ಬ ಸೋಮಾರಿ ಎಂದು ಆರೋಪಿಸಿದ್ದರು.

     ಕಾಶ್ಮೀರದ ಪೊಲೀಸ್ ಅಧಿಕಾರಿಗಳನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಭಾರತ ಪಾಕಿಸ್ತಾನ ನಡುವಿನ ಮಾತುಕತೆ ರದ್ದು ಮಾಡಿರುವ ಕುರಿತು ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ಕಿಡಿಕಾರಿದ್ದು, ಭಾರತದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಅವರಿಗೆ ಮೋದಿ ಹೆದರಿದ್ದಾರೆ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರಕಾರದ ಬಹುದೊಡ್ಡ ಹಗರಣ ಎಂದು ರಫೇಲ್ ಒಪ್ಪಂದ ಕುರಿತು ಆರೋಪಿಸಿದ್ದ ರಾಹುಲ್ ಗಾಂಧಿ ವೀಡಿಯೋ ಹಂಚಿಕೊಂಡಿರುವ ರೆಹಮಾನ್ ಮಲಿಕ್, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ವೀಡಿಯೋ ಪೋಸ್ಟ್ ಮಾಡಿ, ರಾಹುಲ್ ಅವರನ್ನು ನಿಂದನೆ ಮಾಡುವವರು ಈ ವೀಡಿಯೋ ನೋಡಿ. ರಾಹುಲ್ ಒಬ್ಬ ಲೀಡರ್, ನಾನು ಹೇಳಿದ್ದನ್ನೇ ಅವರು ಹೇಳುತ್ತಿದ್ದಾರೆ. ಇದನ್ನು ನೋಡಿದ ಬಳಿಕವಾದರು ನನ್ನ ಬಳಿ ಕ್ಷಮೆ ಕೇಳಿ ಎಂದು ಹೇಳಿದ್ದಾರೆ.

                          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.