ಭಾರತವನ್ನು ಮೆಚ್ಚಿದ ಟ್ರಂಪ್

ನ್ಯೂಯಾರ್ಕ್ :
         ಭಾರತದ ವಿರುಧ ವ್ಯಾಪಾರ ದಿಗ್ಬಂಧನದ ಅಸ್ತ್ರ ಹೂಡಲು ಮುಂದಾಗಿದ್ದ ಟ್ರಂಪ್ ಈಗ ಭಾರತದ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ ಆ ಸಾಧನೆ ಏನೆಂದರೆ ಬಡತನದಿಂದ ಲಕ್ಷಾಂತರ ಜನರನ್ನು ಮೇಲೆತ್ತುವುದರಲ್ಲಿ ಭಾರತದ ಪ್ರಯತ್ನಕ್ಕೆ  ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
         ವಿಶ್ವಸಂಸ್ಥೆ ಸಾಮಾನ್ಯ ಸಭೆಯ 73 ನೇ  ಅಧಿವೇಶನದಲ್ಲಿ ಎರಡನೇ ಬಾರಿಗೆ  ಮಾತನಾಡಿದ ಅವರು, ಭಾರತದಲ್ಲಿ ಅಸಂಖ್ಯಾತ ಲಕ್ಷಾಂತರ ಜನರನ್ನು ಬಡತನದಿಂದ  ಮೇಲೆತ್ತಿ ಮಧ್ಯಮವರ್ಗಕ್ಕೆ  ತರಲಾಗಿದೆ ಎಂದು ಹೇಳಿದರು.35 ನಿಮಿಷಗಳ ಕಾಲ ಸುಧೀರ್ಘ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್,  ಅನೇಕ ರಾಷ್ಟ್ರಗಳ ಜನರು ತಮ್ಮ ರಾಷ್ಟ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲು ಬಂದಿದ್ದಾರೆ. 
          ನಿರ್ಣಯಗಳು ಮತ್ತು  ಪ್ರತಿಯೊಂದು ವಿಶ್ವ ಹಾಗೂ ಪ್ರತಿಯೊಬ್ಬರ ಭರವಸೆಗಳು ನಮ್ಮ ಚಿಂತನೆಗಳಾಗಿಯೇ ಬದಲಾಗಿ   ಅದೇ ಪ್ರಶ್ನೆ ಮೂಡುತ್ತದೆ ಎಂದರು.ಮುಂದಿನ ಪೀಳಿಗೆಯ ಮಕ್ಕಳಿಗೆ ನಾವು ಯಾವ ರೀತಿಯ ಜಗತ್ತನ್ನು ಬೀಡುತ್ತೇವೆ ಮತ್ತು ಅವರು ಯಾವ ರೀತಿಯ ರಾಷ್ಟ್ರಗಳನ್ನು ಪಡೆಯುತ್ತಾರೆ ಎಂಬ ಪ್ರಶ್ನೆ ಇದೆ ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು . ಇಂದು ಸಭಾಂಗಣದಲ್ಲಿ  ವಿವಿಧ ದೇಶಗಳ ಪ್ರತಿನಿಧಿಗಳಿಂದ ವಿಶ್ವಸಂಸ್ಥೆ ಸಾಮಾನ್ಯ ಸಭೆ ತುಂಬಿದೆ .
ವಿಶ್ವ ಸುಧಾರಣೆಯಾಗುತ್ತಿರುವುದಕ್ಕೆ ಉದಾಹರಣೆ ಎಂದರೆ  ಸೌದಿ ಅರೇಬಿಯಾದಲ್ಲಿ ಬಂದಂತಹ ಹೊಸ ಸುಧಾರಣೆಗಳು  ಮತ್ತು ಇಸ್ರೇಲ್ ದೇಶದಲ್ಲಿ  ಪ್ರಜಾಪ್ರಭುತ್ವದ  70 ನೇ ವಾರ್ಷಿಕೋತ್ಸವವನ್ನು “ಹೆಮ್ಮೆಯಿಂದ ಆಚರಿಸುತ್ತಿದ್ದಾರೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದರು ಎಂದು ವರದಿಯಾಗಿದೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap