ತೆಹ್ರಾನ್:
ಕೊರೋನಾ ವೈರಸ್ ನಿಂದ ಬಚಾವಾಗಲು ವಿಷಕಾರಿ ಮೆಥನಾಲ್ ಸೇವಿಸಿ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ. ಇರಾನ್ ನಲ್ಲಿ ಸೋಂಕಿತರ ಸಂಖ್ಯೆ 91 ಸಾವಿರ ಗಡಿ ದಾಟಿದ್ದು 5 ಸಾವಿರ ಜನರು ಮರಣ ಹೊಂದಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ತಿಳಿಸಿದೆ.
ಈ ರೀತಿ ವಿಷಕಾರಿ ಮೆಥನಾಲ್ ಸೇವಿಸಿ ಸತ್ತಿರುವವರ ಸಂಖ್ಯೆ ಶೇ.10 ರಷ್ಟು ಹೆಚ್ಟಾಗಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಉಳಿದವರಲ್ಲಿ ಹೆಚ್ಚಿನವರಲ್ಲಿ ದೃಷ್ಟಿ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ ಫೆಬ್ರವರಿಯಿಂದ ಏಪ್ರಿಲ್ 7ರ ವರೆಗೆ ಸುಮಾರು 728 ಮಂದಿ ಬಲಿಯಾಗಿದ್ದಾರೆ. ಮಿಥೇನಾಲ್ ಎಂಬುದು ವಾಸನೆ ಇರುವುದಿಲ್ಲ. ಜೊತೆಗೆ ರುಚಿಯೂ ಇರುವುದಿಲ್ಲ, ಇದರಲ್ಲಿ ಟಾಕ್ಸಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲ್ಕೋಹಾಲಿಕ್ ದ್ರವಣಗಳಲ್ಲಿ ಅಕ್ರಮವಾಗಿ ಇರಾನ್ ನಲ್ಲಿ ಇದನ್ನು ಬಳಸಲಾಗುತ್ತಿದೆ.
