ಬೀಜಿಂಗ್:
ಕೊರೋನಾ ತವರೂರಾದ ಚೀನಾದಲ್ಲಿ ಪ್ರಪಾತಕ್ಕೆ ಕುಸಿದಿದ್ದ ಕೈಗಾರಿಕಾ ಉತ್ಪಾದನೆಯು ಮತ್ತೆ ಏರಿಕೆಯಾಗಿದೆ. ಈ ಮೂಲಕ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದರ ಮುನ್ಸೂಚನೆ ನೀಡಿದೆ. 2020ರ ಮೇ ತಿಂಗಳಲ್ಲಿ ಚೀನಾದ ಕೈಗಾರಿಕಾ ಉತ್ಪಾದನೆಯು ಶೇಕಡಾ 4.4ಕ್ಕೆ ಏರಿಕೆಯಾಗಿದೆ. ಏಪ್ರಿಲ್ನಲ್ಲಿ ಇದು 3.9 ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.
2020ರ ಮೊದಲ ಎರಡು ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಕೈಗಾರಿಕಾ ಉತ್ಪಾದನೆಯು ಶೇ. 13.5ರಷ್ಟು ಕುಸಿದಿತ್ತು. ನಂತರ ಮೂರು ಪ್ರಮುಖ ವಿಭಾಗಗಳಲ್ಲಿರುವ ವಿದ್ಯುತ್, ಶಾಖ, ಅನಿಲ ಮತ್ತು ನೀರಿನ ಉತ್ಪಾದನೆಯ ಬೆಳವಣಿಗೆ, ಮೇ ತಿಂಗಳಲ್ಲಿ ವರ್ಷಕ್ಕೆ 3.6ರಷ್ಟು ಏರಿಕೆಯಾಗಿದ್ದು, ಏಪ್ರಿಲ್ನಲ್ಲಿ ಶೇಕಡಾ 0.2 ರಷ್ಟು ಏರಿಕೆಯಾಗಿತ್ತು.
ಇದಲ್ಲದೆ, ಉತ್ಪಾದನೆಯು ಹಿಂದಿನ ತಿಂಗಳಿನ 5 ಪ್ರತಿಶತದ ಬೆಳವಣಿಗೆಗೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇಕಡಾ 5.2 ರಷ್ಟು ಏರಿಕೆಯಾಗಿದೆ ಮತ್ತು ಗಣಿಗಾರಿಕೆ ಮೇ ತಿಂಗಳಲ್ಲಿ ಶೇಕಡಾ 1.1ರಷ್ಟು ಏರಿಕೆಯಾಗಿದೆ.