ಇಸ್ಲಾಮಾಬಾದ್
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಪುಣ್ಯತಿಥಿಯಾದ ಮೇ.4ರಂದು ಗೌರವ ನಮನ ಸಲ್ಲಿಸಿದ್ದಾರೆ.
ಅವರೊಬ್ಬ ಧೈರ್ಯಶಾಲಿ ಸ್ವತಂತ್ರ ಹೋರಾಟಗಾರರಾಗಿದ್ದರು ಮತ್ತು ಗುಲಾಮಗಿರಿ ಜೀವನ ನಡೆಸುವ ಬದಲು ಹೋರಾಡಿ ನಿಧನರಾದರು’ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. ಇದೇ ಮೊದಲ ಸಲ ಇಮ್ರಾನ್ ಖಾನ್, ಟಿಪ್ಪು ಸುಲ್ತಾನ್‌ರನ್ನು ಶ್ಲಾಘಿಸಿದ್ದಾರೆ. ನಾವು ಎರಡು ರಾಜರ ಕುರಿತು ಕೇಳಿದ್ದೇವೆ. ಟಿಪ್ಪು ಸುಲ್ತಾನ್ ಮತ್ತು ಮೊಘಲ್ ದೊರೆ ಬಹಾದ್ದೂರ್ ಶಹಾ ಜಾಫರ್. ಆದರೆ ಟಿಪ್ಪು ಹೀರೋ. ಸಿಂಹದಂತೆ ಬದುಕಿದವರು ಎಂದು ಖಾನ್ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
