ಪಾಕಿಸ್ತಾನ :
ಕೆಲ ದಿನಗಳ ಹಿಂದೆಯಷ್ಟೆ ಜಾಗತಿಕವಾಗಿ ಆರ್ಥಿಕ ಕಪ್ಪು ಪಟ್ಟಿಗೆ ತಳ್ಳಪ್ಪಟ್ಟಿದ ಪಾಕಿಸ್ತಾನ ಎಫ್‌ಎಟಿಎಫ್ ವಿಧಿಸಿರುವ ಸುಮಾರು 27 ಮಾನದಂಡಗಳನ್ನು ಪೂರೈಸಲು ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿದೆ ಎಂದು ಪಾಕಿಸ್ತಾನದ ಪ್ರಧಾನಿ ತಿಳಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ 12 ಸದಸ್ಯರಿರುವ ಸಮಿತಿಯನ್ನು ರಚಿಸಿದ್ದು ಮಾನದಂಡ ಪೂರೈಕೆಗಾಗಿ ಹಗಲಿರುಳು ಶ್ರಮಿಸಿಲಾಗುತ್ತಿದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ. ಉಗ್ರರಿಗೆ ಸದ್ಯ ಹೋಗುತ್ತಿರುವ ಹಣವನ್ನು ಸಂಪೂರ್ಣ ಸ್ತಗಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ.
ಆರ್ಥಿಕ ವ್ಯವಹಾರಗಳ ವಿಭಾಗದ ಸಚಿವ ಹಮ್ಮದ್ ಅವರ ನೇತೃತ್ವದಲ್ಲಿ, ರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ ಸಮನ್ವಯ ಸಮಿತಿಯು ಹಣಕಾಸು, ವಿದೇಶಾಂಗ ವ್ಯವಹಾರಗಳು ಮತ್ತು ಆಂತರಿಕ ವ್ಯವಹಾರ ಮತ್ತು ಭದ್ರತಾ ಇಲಾಖೆಯ ಕಾರ್ಯದರ್ಶಿಗಳನ್ನು ಒಳಗೊಂಡಿದೆ ಮತ್ತು ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಹಣ ವರ್ಗಾವಣೆ ಮತ್ತು ಭಯೋತ್ಪಾದಕ ನಿಗ್ರಹ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







