ಮನಿಲಾ
ರೊಡ್ರಿಗೋ ಡುಟೆರ್ಟ್ ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದ ಜನ ಅವರ ಆ ಮಾತಿಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು.ಅಧ್ಯಕ್ಷರ ಕ್ಷಮೆಗೆ ಆಗ್ರಹಿಸಿದ್ದಾರೆ.
ಡುಟೆರ್ಟ್ ಅವರು ತಮ್ಮ ಪ್ರೌಡಾವಸ್ತೆಯಲ್ಲಿ ತಮ್ಮ ಮನೆ ಕೆಲಸದಾಕೆಯನ್ನು ಸ್ಪರ್ಶಿಸಿರುವ ಬಗ್ಗೆ ನೀಡಿದ ಹೇಳಿಕೆಗೆ ಮಹಿಳಾ ಹಕ್ಕು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ ಎಂದು ವರದಿಯಾಗಿದ್ದು
ಡುಟೆರ್ಟ್ ಅವರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಲೈಂಗಿಕ ಶೋಷಣೆಗೆ ಪ್ರೋತ್ಸಾಹ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಒಬ್ಬ ಅಸಹಾಯಕ ಹೆಣ್ಣಿನ ಬಗ್ಗೆ ಅದರಲ್ಲೂ ಅತ್ಯಾಚಾರದ ಜೋಕ್ ಗಳು ಮತ್ತು ಹಾದರದ ಬಗ್ಗೆ ಮಾತನಾಡುವ ಮೂಲಕ ಡುಟೆರ್ಟ್ ಕ್ಷಮಿಸಲಾಗದಂತಹ ತಪ್ಪು ಮಾಡಿದ್ದಾರೆ , ತಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಮಾಡಿಕೊಂಡಿದ್ದ ಪಾಪ ನಿವೇದನೆ, ಮನೆಗೆಲಸದಾಕೆ ತನ್ನ ಕೋಣೆಯಲ್ಲಿ ಮಲಗಿದ್ದಾಗ ಹೇಗೆ ಒಳಪ್ರವೇಶ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








