ವಾಷಿಂಗ್ಟನ್:
ಇಡೀ ವಿಶ್ವದಲ್ಲಿಯೇ ಭಾರತ ಕಠಿಣ ವಾಣಿಜ್ಯ ಸಮಾಲೋಚಕ ದೇಶ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಬುಧವಾರ ಬಣ್ಣಿಸಿದ್ದಾರೆ.
ಇಂದು ವೈಟ್ ಹೌಸ್ ನಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆ ವೇಳೆ ದೀಪ ಹಚ್ಚಿ ಮಾತನಾಡಿದ ಅವರು ಆಚರಣೆಗೆ ಚಾಲನೆ ನೀಡಿದರು. ಬಳಿಕ ಅಲ್ಲಿಯೇ ಇದ್ದ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ-ಅಮೆರಿಕ ಅತ್ಯಾಪ್ತರಾಷ್ಟ್ರಗಳಾಗಿದ್ದು. ಮುಂದಿನ ದಿನಗಳಲ್ಲಿ ನಮ್ಮ ದ್ವೈಪಾಕ್ಷಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭಾರತ ಕಠಿಣ ಮತ್ತು ಉತ್ತಮ ವಾಣಿಜ್ಯ ಸಮಾಲೋಚಕ ಮಿತ್ರ ರಾಷ್ಟ್ರವಾಗಿದೆ.
ಮುಂಬರುವ ದಿನಮಾನಗಳಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ಮತ್ತಷ್ಟು ವೃದ್ದಿಯಾಗಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಭಾರಿಯಾಗಿದ್ದೇನೆ . ಪ್ರಧಾನಿ ಮೋದಿ ನನ್ನ ಸ್ನೇಹಿತ ಈಗ ಇವಾಂಕಾ ಟ್ರಂಪ್ ಗೂ ಮಿತ್ರರಾಗಿದ್ದಾರೆ ಎಂದು ಹೇಳುವ ಮೂಲಕ ಭಾರತವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








