ಸಿಡ್ನಿ:
ಆಸ್ಟ್ರೇಲಿಯಾ ತಂಡದ ಮಾಜಿ ಆಲ್‍ರೌಂಡರ್ ಶೇನ್ ವ್ಯಾಟ್ಸನ್ ಅವರು “ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್” ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಸೋಮವಾರ ಎಸಿಎ ಎಜಿಎಂನಲ್ಲಿ ನಡೆದಿದ್ದ ಸಭೆಯಲ್ಲಿ ವ್ಯಾಟ್ಸನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಮಂಡಳಿಯಲ್ಲಿ ಶೇನ್ ವ್ಯಾಟ್ಸನ್ ಸಹ ಒಬ್ಬರು. ಮಂಡಳಿಗೆ ಮೂವರು ಹಾಲಿ ಮತ್ತು ಮಾಜಿ ಕ್ರಿಕೆಟಿಗರನ್ನು ಹೊಸದಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರರಾದ ಪ್ಯಾಟ್ ಕಮಿನ್ಸ್ ಹಾಗೂ ಕ್ರಿಸ್ಟೆನ್ ಬೀಮ್ಸ್ ಮತ್ತು ಕ್ರಿಕೆಟ್ ವಿಶ್ಲೇಷಣಾಕಾರ ಮತ್ತು ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ಲಿಸಾ ಸ್ಟ್ಯಾಲೇಕರ್ ಈ ಮಂಡಳಿಯಲ್ಲಿದ್ದಾರೆ ಎನ್ನಲಾಗಿದೆ.
“ಎಸಿಎ ಭವಿಷ್ಯದ ದೃಷ್ಠಿಯಿಂದ ಅಧ್ಯಕ್ಷರಾಗಿ ನೇಮಕವಾಗಿರುವುದು ನಿಜಕ್ಕೂ ಹೆಮ್ಮೆ ಎನಿಸಿದೆ ಎಂದು ತಿಳಿಸಿದ್ದಾರೆ.ಕ್ರಿಕೆಟ್‍ಗೆ ಮತ್ತೊಂದು ಆಯಾಮದಲ್ಲಿ ಕೊಡುಗೆ ನೀಡಲು ಅವಕಾಶ ಸಿಕ್ಕಿರುವುದು ನನ್ನಲ್ಲಿ ಇನ್ನಷ್ಟು ಉತ್ಸಾಹ ತಂದಿದೆ.” ಎಂದು ಶೇನ್ ವ್ಯಾಟ್ಸ್‍ನ್ ಹರ್ಷ ವ್ಯಕ್ತಪಡಿಸಿದ್ದಾರೆ.