ಅಂತರಾಷ್ಟ್ರೀಯ ಹುಲಿ ದಿನ : ಹುಲಿರಾಯನ ಬಗೆಗಿನ ಕುತೂಹಲಕಾರಿ ಅಂಶಗಳು ….>!

    ಅಂತರಾಷ್ಟ್ರೀಯ ಹುಲಿ ದಿನ . ಇದನ್ನು ಗ್ಲೋಬಲ್ ಟೈಗರ್ ಡೇ ಎಂದೂ ಕರೆಯಲಾಗುತ್ತದೆ.ಪ್ರತಿ ವರ್ಷ ಜುಲೈ 29 ರಂದು ಹುಲಿ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಹುಲಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಈ ಭವ್ಯವಾದ ಜಾತಿಯನ್ನು ಅಳಿವಿನಂಚಿನಿಂದ ರಕ್ಷಿಸುವ ಗುರಿಯನ್ನು ಹೊಂದಿದೆ ಎನ್ನುವುದು ಈ ದಿನದ ವೈಶಿಷ್ಟ.2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಟೈಗರ್ ಸಮ್ಮಿತ್ ನಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.ಇದರಲ್ಲಿ 13 ಹುಲಿ ವಾಸದೇಶಗಳು  2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಘೋಷಿಸಿದವು.

    2010ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಟೈಗರ್ ಸಮ್ಮಿತ್ ನಲ್ಲಿ, ಕಳೆದ ಶತಮಾನದಲ್ಲಿ ಹುಲಿಗಳ ಸಂಖ್ಯೆಯು 97% ಕಡಿಮೆಯಾಗಿದೆ ಎಂಬ ಆತಂಕಕಾರಿ ಸತ್ಯದಿಂದಾಗಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಸುಮಾರು 1,00,000 ಹುಲಿಗಳು 20ನೇ ಶತಮಾನದ ಆರಂಭದಲ್ಲಿ ಇದ್ದವು.ಆದರೆ 2010ರ ವೇಳೆಗೆ ಕೇವಲ 3,200 ಹುಲಿಗಳು ಮಾತ್ರ ಉಳಿದಿದ್ದವು ಎಂಬ ಆತಂಕಕಾರಿ ಅಂಶ ಹುಲಿ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಿತು.

   ವಿಶ್ವದ ಒಟ್ಟು ಹುಲಿಗಳ ಸಂಖ್ಯೆ ವರ್ಲ್ಡ್ ವೈಲ್ಡ್ ಲೈಫ್ ಫoಡ್ (wwf) 2025 ರ ಪ್ರಕಾರ ವಿಶ್ವದಲ್ಲಿ ಸುಮಾರು 3900 ಕಾಡು ಹುಲಿಗಳು ಉಳಿದಿವೆ.ಇದು ಇದು 20ನೇ ಶತಮಾನದಲ್ಲಿ ಆರಂಭದಲ್ಲಿ ರೂ.1 ಲಕ್ಷ ಇದ್ದಿದ್ದಕ್ಕೆ ಹೋಲಿಸಿದರೆ ಶೇಕಡ 95 ಕಡಿಮೆಯಾಗಿದೆ. ಹುಲಿಗಳ ಆವಾಸಸ್ಥಾನ: ಹುಲಿಗಳು 13 ದೇಶಗಳಾದ ಭಾರತ,ಬಾಂಗ್ಲಾದೇಶ,ಭೂತಾನ್, ಕಾಂಬೋಡಿಯ, ಚೀನಾ, ಇಂಡೋನೇಷಿಯಾ, ಲಾವೋಸ್, ಮಲೇಶಿಯಾ,ಮಿಯನ್ಮರ್,ನೇಪಾಳ, ರಷ್ಯಾ, ಥೈಲ್ಯಾಂಡ್ ಮತ್ತು ವಿಯಾಟ್ನಮ್ ದೇಶಗಳಲ್ಲಿ ಕಂಡುಬರುತ್ತದೆ.ವಿಶ್ವದ ಹುಲಿಗಳ ಜನಸಂಖ್ಯೆಯಲ್ಲಿ ಭಾರತ ಸುಮಾರು 75ರಷ್ಟು 3682 ಹುಲಿಗಳನ್ನು ಹೊಂದಿದೆ ಎಂಬುದು ಇಲ್ಲಿ ಗಮನಕಾರಿ ಅಂಶ. ಹುಲಿಗಳ ಸಂತತಿ ರಕ್ಷಿಸಿ -ಬೆಳೆಸಲು ಭಾರತದಲ್ಲಿ ಹಲವು ಯೋಜನೆಗಳು ಕಾರ್ಯಗತವಾಗುತ್ತಿವೆ.

   ಕರ್ನಾಟಕ ರಾಜ್ಯದಲ್ಲಿ ಅರಣ್ಯ ಇಲಾಖೆ ಮುಂದಾಳತ್ವದಲ್ಲಿ ಇದು ಕಾರ್ಯಗತವಾಗುತ್ತಿದೆ.ಆದರೆ ವಿಷಾದದ ಸಂಗತಿ ಎಂದರೆ ಇತ್ತೀಚಿಗೆ ವನ್ಯಜೀವಿ -ಮಾನವ ಸಂಘರ್ಷ ಅತಿರೇಕ ತಲುಪುತ್ತಿದೆ. ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯಲ್ಲಿ 5 ಹುಲಿಗಳಿಗೆ ವಿಷಪ್ರಾಷನ ದುರಂತ ಇದಕ್ಕೆ ಉದಾಹರಣೆ. ಅರಣ್ಯ ಇಲಾಖೆ ಈ ಸಂಘರ್ಷ ತಪ್ಪಿಸಲು ಸರಕಾರ ನೀಡುವ ಅನುದಾನವನ್ನು ಪ್ರಾಮಾಣಿಕ ಕಾರ್ಯನಿರ್ವಹಣೆ ಯಿಂದ ಬಳಸಿ, ತಡೆಬೇಲಿ, ನಿರ್ದಿಷ್ಟ ಅಳತೆಯ ಅಗಳ (ಟ್ರೆಂಚ್)ನಿರ್ಮಿಸಬೇಕಾಗಿದೆ. ಒಂದು ಮೂಲಗಳ ಪ್ರಕಾರ ಸರಕಾರದ ಪ್ರಾಜೆಕ್ಟ್ ಗಳೆಲ್ಲವೂ ಭ್ರಷ್ಟಾಚಾರದಿಂದ ವಿಫಲತೆಯ ಹಾದಿಯಲ್ಲಿದೆ. ಹೀಗಾದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬುದು ಮುಗಿಲ ಮಲ್ಲಿಗೆಯಾಗುತ್ತದೆ.

Recent Articles

spot_img

Related Stories

Share via
Copy link