ಚೇನಾ :
ಸ್ವಯಂ ಕೃತ ಅಪರಾಧದಿಂದ ಈಗ ಚೀನಾ ತನ್ನ ಶಕ್ತಿ ಎಂದೇ ಭಾವಿಸಿರುವ ಜನಸಂಖ್ಯೆ (ದುಡಿಯುವ ಕೈ)ಯನ್ನು ಕೊರೊನಾ ವೈರಸ್ ಗೆ ಧಾರೆಯೆರೆಯುವ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವದ ಸುಭದ್ರ ಮಾರುಕಟ್ಟೆಯಾಗಿ ಪ್ರಖ್ಯಾತಿ ಪಡೆದಿದ್ದ ಚೀನಾ ಇಂದು ಸರ್ವವನ್ನು ಒಂದು ವೈರಸ್ ಗಾಗಿ ಬಲಿಕೊಟ್ಟಿದೆ ಎಂದು ಚೀನಾ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತನ್ನ ತಪ್ಪಿನಿಂದ ಎಚ್ಚೆತ್ತಿರುವ ಚೀನಾ ಈಗ ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ರು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ನಡುವೆ ಕೊರೊನಾ ವೈರಸ್ ಚೀನಿ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಆಟೋ ಉದ್ಯಮ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ ಎನ್ನಲಾಗಿದೆ.
ಕೊರೊನಾ ವೈರಸ್‌ನಿಂದಾಗಿ ಪ್ರಮುಖ ಕಾರು ಉತ್ಪಾದನಾ ಘಟಕಗಳು ಹೊಸ ವಾಹನ ಉತ್ಪಾದನೆಯನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ವಾಹನ ಮಾರಾಟವು ಕೇವಲ ಒಂದೇ ತಿಂಗಳಿನಲ್ಲಿ ಶೇ.18ರಿಂದ ಶೇ.20 ರಷ್ಟು ಇಳಿಕೆ ಕಂಡಿದೆ. ಇದು ಫೆಬ್ರುವರಿ ಅವಧಿಯಲ್ಲಿನ ವಾಹನ ಮಾರಾಟ ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದ್ದು, ಪರಿಸ್ಥಿತಿ ಸದ್ಯಕ್ಕೆ ತಿಳಿಗೊಳ್ಳುವಂತೆ ಕಾಣುತ್ತಿಲ್ಲ.
ವಿಶ್ವದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳನ್ನೇ ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ