ಆಂಟಿಗುವಾ:
ಸದ್ಯ ಚಾಲ್ತಿಯಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಭಾರತದ ಸರಣಿಯಲ್ಲಿ ವೆಸ್ಟ್ ಇಂಡೀಸ್ ನ ಆಟಗಾರ ದಾಖಲೆ ಬರೆದದಿದ್ದಾನೆ .ವಿಂಡೀಸ್ ಆಟಗಾರ ಮಿಗುಯೆಲ್ ಕಮ್ಮಿನ್ಸ್ ಕಳಪೆ ಪ್ರದರ್ಶನ ನೀಡುವುದರಲ್ಲಿ ದಾಖಲೆ ಮಾಡಿದ್ದಾರೆ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ನಡೆದ ಪಂದ್ಯದಲ್ಲಿ ಬರೋಬ್ಬರಿ 95 ನಿಮಿಷ ಕ್ರಿಸ್ನಲ್ಲಿದ್ದ ಕಮ್ಮಿನ್ಸ್ 45 ಎಸೆತಗಳನ್ನು ಎದುರಿಸಿದ್ದರು. ಆದರೆ ಗಳಿಸಿದ ರನ್ ಮಾತ್ರ ಶೂನ್ಯ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಮಯ ಕ್ರಿಸ್ನಲ್ಲಿದ್ದು ರನ್ ಗಳಿಸದೆ ಔಟಾದ 2ನೇ ಆಟಗಾರ ಎಂಬ ಕಳಪೆ ಸಾಧನೆಯನ್ನು ಮಾಡಿದರು.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಜಾಫ್ ಅಲೋಟ್ ಮೊದಲ ಸ್ಥಾನ ಪಡೆದಿದ್ದು, 1999 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 101 ನಿಮಿಷ ಬ್ಯಾಟಿಂಗ್ ನಡೆಸಿ ಡಕೌಟ್ ಆಗಿದ್ದರು. 2000ರ ಬಳಿಕ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಜೇಮ್ಸ್ ಆಂಡರ್ಸನ್ ಶ್ರೀಲಂಕಾ ವಿರುದ್ಧ 2014 ರಲ್ಲಿ ನಡೆದ ಪಂದ್ಯಲ್ಲಿ 55 ಎಸೆತ ಎದುರಿಸಿ ರನ್ ಗಳಿಸದೆ ಔಟಾಗಿದ್ದರು ಎಂದು ಐಸಿಸಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ