ಜಾರ್ಜ್ ಗ್ಯಾರೆಂಟಿ ಭಾಷಣಕ್ಕೆ ಅಡ್ಡಿ….!

ಚಿಕ್ಕಮಗಳೂರು :

   ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನೆ ವೇಳೆ ಸಚಿವ ಕೆ.ಜೆ ಜಾರ್ಜ್ ಭಾಷಣಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ಜಾರ್ಜ್ ಅವರಿಗೆ ಆಕ್ಷೇಪ ವ್ಯಕ್ತವಾಗಿದೆ. ನಗರದ ಎಐಟಿ ವೃತ್ತದ ಬಳಿ ನೂತನ ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಭಾಷಣದ ವೇಳೆ ಸಭೆಯಲ್ಲಿದ್ದ ಒಕ್ಕಲಿಗ ಯುವಕರಿಂದ ಸಚಿವ ಜಾರ್ಜ್ ಭಾಷಣಕ್ಕೆ ಆಕ್ಷೇಪ ಕೇಳಿ ಬಂತು ವೇದಿಕೆಯತ್ತ ತೆರಳಿ ಸಚಿವರು ಭಾಷಣ ನಿಲ್ಲಿಸುವಂತೆ ತಡೆಯಲಾಗಿದೆ.

   ಈ ವೇಳೆ ಮಧ್ಯ ಪ್ರವೇಶಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಯುವಕರನ್ನು ಸಮಾಧಾನ ಪಡಿಸಿದರು. ಸ್ವಾಮೀಜಿ ಮಧ್ಯ ಪ್ರವೇಶದಿಂದ ಯುವಕರು ಸುಮ್ಮನಾದರು. ನಂತರ ತಮ್ಮ ಮಾತಿಗೆ ಸಭೆಯಲ್ಲೇ ಸಚಿವ ಜಾರ್ಜ್ ಕ್ಷಮೆಯಾಚಿಸಿದರು ಅರ್ಧಕ್ಕೆ ಭಾಷಣ ನಿಲ್ಲಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಮುಜುಗರಕ್ಕೆ ಒಳಗಾದರು.

   ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಕ್ಕೆ ಮುಂದಾದ ಸಚಿವ ಕೆ.ಜೆ.ಜಾರ್ಜ್ ಪೇಚಿಗೆ ಸಿಲುಕಿದಂತಾಗಿದೆ. ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಆಕ್ರೋಶ ವ್ಯಕ್ತವಾಯಿತು. ಈ ವೇಳೆ ಗರಂ ಆದ ಸಚಿವ ಜಾರ್ಜ್ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತೆ ಅಂತ ಸಿಟ್ಟಾದರು.ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು ಕೊನೆಗೆ ನಿರ್ಮಲಾನಂದ ಶ್ರೀಗಳ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಯಿತು. ತಮ್ಮ ಮಾತಿಗೆ ಸಭೆಯಲ್ಲೇ ಎರಡೆರಡು ಬಾರಿ ಕ್ಷಮೆಯಾಚಿಸಿದರು.

Recent Articles

spot_img

Related Stories

Share via
Copy link