ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳ  ಪೈಕಿ ಭಾರತವೂ ಒಂದು:ಟ್ರಂಪ್

ವಾಷಿಂಗ್ಟನ್:
        ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳ  ಪೈಕಿ ಭಾರತವೂ ಒಂದು  ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
          ಅಮೆರಿಕಾದ ಪ್ರಖ್ಯಾತ ಉತ್ಪನ್ನಗಳಿಗೆ ಶೇ.100 ರಷ್ಟು ಸುಂಕವನ್ನು ವಿಧಿಸಿರುವ ಒ ಭಾರತದ ಕ್ರಮಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

         ಹೆಚ್ಚಿನ ಸುಂಕ ನ್ಯಾಯೋಚಿತವಲ್ಲ, ಎಂದಿರುವ ಟ್ರಂಪ್ “ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ನನಗೆ ಕರೆ ಬಂದಿದ್ದು ಭಾರತವು  ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಆ ರಾಷ್ಟ್ರವು ನಮಗೆ 100 ಶೇ. ತೆರಿಗೆ ವಿಧಿಸಿದೆ” ಎಂದರು. ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಸಿನಲ್ ಕಮಿಟಿಯ ವಾರ್ಷಿಕ ಸ್ಪ್ರಿಂಗ್ ಡಿನ್ನರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

“ಅಮೆರಿಕಾದ ವಸ್ತುಗಳಿಗೆ ಅಧಿಕ ತೆರಿಗೆ ವಿಧಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು, ಇದು ನಮಗೆ ಬೇಸರ ಉಂಟುಮಾಡಿದೆ.ಹಿಂದೊಮ್ಮೆ ನಾನು ಈ ವಿಚಾರದ ಬಗ್ಗೆ ಮಾತನಾಡಿದರೂ ಭಾರತ ಎಚ್ಚೆತ್ತುಕೊಂಡಿಲ್ಲ. ಒಂದೊಮ್ಮೆ ಹೀಗೇ ಮುಂದುವರಿದರೆ ನಾವು ಸಹ ಭಾರತದ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿಅಬೇಕಾಗುವುದು ಎಂದು ಅವರು ಎಚ್ಚರಿಸಿದ್ದಾರೆ.