ಇಸ್ಲಾಮಾಬಾದ್
ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಗವದಾರ್ ಬಂದರು ನಗರದಲ್ಲಿನ ಪರ್ಲ್ ಕಾಂಟಿನೆಂಟಲ್ ಪಂಚಾತಾರ ಹೋಟೆಲ್ ಮೇಲೆ ಸಶಸ್ತ್ರಧಾರಿ ಉಗ್ರರ ಪಡೆಯೊಂದು ಗುಂಡಿನ ದಾಳಿಯವಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗಗೊಂಡಿದ್ದಾರೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಶನಿವಾರ ಸಂಜೆ ಮೂರ್ನಾಲ್ಕು ಜನರ ಬಂದೂಕುಧಾರಿಗಳ ಗುಂಪೊಂದು ಸೇನೆಯ ಮಾರುವೇಷದಲ್ಲಿ ಹೋಟೆಲ್ ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಸಿದೆ. ಆದರೆ, ಸೆಕ್ಯೂರಿಟಿ ಗಾರ್ಡ್ ಅವರನ್ನು ಒಳಗಡೆ ಹೋಗದಂತೆ ತಡೆದಿದ್ದಾನೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸಾರ್ವಜನಿಕ ಸಂಪರ್ಕ ಆಂತರಿಕ ಸೇವೆಯು ತಿಳಿಸಿದೆ.
ಅರೆಸೇನಾ ಪಡೆ ಮತ್ತು ಸೇನೆಯಿಂದ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬಲೋಚಿಸ್ತಾನದ ಗೃಹ ಸಚಿವ ಜಿಯಾ ಉಲ್ಲಾ ಲಂಗೌ ಹೇಳಿದ್ದು, ಹೋಟೆಲ್ ನಲ್ಲಿದ್ದ ಇತರರನ್ನು ರಕ್ಷಿಸಲಾಗಿದೆ