ಬೆಂಗಳೂರು :
ವಿದೇಶದಿಂದ ಭಾರತಕ್ಕೆ ಐಫೋನ್‍ಗಳನ್ನು ಕಳ್ಳಸಾಗಣೆಯಾಗುತ್ತಿದ್ದ 2.8 ಕೋಟಿ ರೂ. ಮೌಲ್ಯದ 200 ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
49 ವರ್ಷದ ಪತಿ, 38 ವರ್ಷದ ಪತ್ನಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದಾಗ ಅವರ ಲಗೇಜ್‍ನಲ್ಲಿ ದುಬಾರಿ ಮೌಲ್ಯದ ಫೋನ್‍ಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಐಫೋನ್-12 ಪ್ರೊ ಮತ್ತು ಪ್ರೊಮ್ಯಾಕ್ಸ್ ಶ್ರೇಣಿಯ 206 ಮೊಬೈಲ್‍ಗಳನ್ನು ದಂಪತಿಯಿಂದ ವಶಪಡಿಸಿಕೊಳ್ಳಲಾಗಿದೆ. ಕಳೆದ ಫೆ.13ರಂದು ಫ್ರಾನ್ಸ್ ತೊರೆದ ಈ ದಂಪತಿ ಮುಂಬೈಗೆ ಬಂದಿದ್ದರು. ಅಲ್ಲಿಂದ ಕಳ್ಳ ಸಾಗಾಣಿಕೆಯ ಮಾಲುಗಳೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಿಂದ ಐಷರಾಮಿ ಮೊಬೈಲ್‍ಫೋನ್‍ಗಳನ್ನು ತಂದು ಮಾರಾಟ ಮಾಡುವ ಜಾಲದೊಂದಿಗೆ ಈ ದಂಪತಿ ಕೈ ಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕದಲ್ಲಿ ವಾಸ ಇರುವ ಇವರ ಬಳಿ ಸುಮಾರು 37ಕ್ಕೂ ಹೆಚ್ಚು ವಿವಿಧ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳು ಲಭ್ಯವಾಗಿದೆ. ವಶಪಡಿಸಿಕೊಳ್ಳಲಾದ ಫೋನ್‍ಗಳ ಮೌಲ್ಯ 2,74,19,400 ರೂ.ಗಳೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರು ಫೆಬ್ರವರಿ 13 ರಂದು ಮುಂಬೈನಿಂದ ಫ್ರಾನ್ಸ್‌ಗೆ ತೆರಳಿದ್ದರು, ಭಾನುವಾರ ಕೆಂಪೇಗೌಡ ಏರ್‌ಪೋರ್ಟ್ ಬಂದಿಳಿದಿದ್ದರು. ಅವರನ್ನು ಮಾರ್ಚ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
