ಐಪಿಎಲ್ 2021: ಟೂರ್ನಿ ಪುನಾರಂಭಿಸಲು ಬಿಸಿಸಿಐ ಮುಂದಿದೆ 3 ಆಯ್ಕೆಗಳು

      ಐಪಿಎಲ್ ಬಯೋಬಬಲ್‍ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದಂತೆಯೇ ಬಿಸಿಸಿಐ ಈ ಬಾರಿಯ ಐಪಿಎಲ್‍ಅನ್ನು ಸಂಪೂರ್ಣವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ.

      ಸೋಮವಾರ ಕೆಕೆಆರ್ ತಂಡದ ಇಬ್ಬರು ಆಟಗಾರರು ಕೊರೊನಾ ವೈರಸ್‍ಗೆ ತುತ್ತಾದ ನಂತರ ಮಂಗಳವಾರ ಮತ್ತೆರಡು ಕೊರೊನಾ ವೈಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬಿಸಿಸಿಐ ಈ ಮಹತ್ವದ ನಿರ್ಧಾರ ಘೋಷಿಸಿದೆ. ಸದ್ಯ ಬಿಸಿಸಿಐ ಈ ಬಾರಿಯ ಐಪಿಎಲ್‍ಅನ್ನು ಮುಂದೂಡಿದೆಯಾದರು ಟೂರ್ನಿಯ ಪುನಾರಂಭ ಯಾವಾಗ ಎಂಬುದು ಪ್ರಶ್ನೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ಮಹತ್ವದ ಟೂರ್ನಿಗಳು ಹಾಗೂ ಸರಣಿಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಉಳಿದ ಐಪಿಎಲ್ ಪಂದ್ಯಗಳನ್ನು ಹೇಗೆ ನಡೆಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

10 ದಿನಗಳ ಬ್ರೇಕ್ ನಂತರ ಮುಂಬೈಗೆ ಶಿಫ್ಟ್ :

      ಕೆಕೆಆರ್ ಹಾಗೂ ಸಿಎಸ್‍ಕೆ ಪಾಳಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದ ನಂತರ ಬಿಸಿಸಿಐ ಈ ಬದಲಾವಣೆಯ ಬಗ್ಗೆ ಚಿಂತನೆ ನಡೆಸಿತ್ತು. ಸದ್ಯ ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‍ಡೌನ್ ಇದ್ದು ಕೊರೊನಾ ವೈರಸ್ ಭಾರೀ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಮೂರು ಕ್ರೀಡಾಂಗಣಗಳು ಇರುವ ಕಾರಣ ಸಂಪೂರ್ಣ ಟೂರ್ನಿಯನ್ನು ಮುಂಬೈನಲ್ಲಿ ನಡೆಸುವ ಅವಕಾಶಗಳು ಇದೆ. ಸದ್ಯ ಐಪಿಎಲ್ ಬಯೋಬಬಲ್‍ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಕಾರಣ ಹತ್ತು ದಿನಗಳ ವಿರಾಮದ ಬಳಿಕ ಮತ್ತೆ ಟೂರ್ನಿಯನ್ನು ಆಯೋಜಿಸುವ ಚಿಂತನೆಯನ್ನು ಬಿಸಿಸಿಐ ನಡೆಸುವ ಸಾಧ್ಯೆತೆಯಿದೆ.

ಯುಎಇನಲ್ಲಿ ಜೂನ್ ತಿಂಗಳಲ್ಲಿ ನಡೆಯುತ್ತಾ:

      ಬಿಸಿಸಿಐಗೆ ಈ ಬಾರಿಯ ಐಪಿಎಲ್‍ಅನ್ನು ನಡೆಸಲು ಇರುವ ಮತ್ತೊಂದು ಅವಕಾಶವೆಂದರೆ ಜೂನ್ ತಿಂಗಳು. ಈ ಸಮಯದಲ್ಲಿ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ನಡೆಯಲಿದೆ. ಜೂನ್ 18ರಿಂದ ನಡೆಸಲುದ್ದೇಶಿಸಿರುವ ಈ ಟೂರ್ನಿಯನ್ನು ಮುಂದೂಡುವಂತೆ ಐಸಿಸಿಯನ್ನು ಒಪ್ಪಿಸಿ ಆ ಅವಕಾಶದಲ್ಲಿ ಐಪಿಎಲ್‍ಅನ್ನು ಯುಎಇನಲ್ಲಿ ಪೂರ್ಣಗೊಳಿಸುವ ಸಾಧ್ಯತೆಯನ್ನೂ ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿದೆ.

ವಿಶ್ವಕಪ್‍ಗೆ ಮುನ್ನ ಅಕ್ಟೋಬರ್ ತಿಂಗಳಲ್ಲಿ:

      ಈಗಾಗಲೇ ನಿಗದಿಯಾಗಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್‍ನ ಫೈನಲ್ ಪಂದ್ಯ ಜೂನ್ 18ರಿಂದ ಆರಂಭವಾಗಿ 22ಕ್ಕೆ ಅಂತ್ಯವಾಗುತ್ತದೆ. ಬಳಿಕ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಆರಂಭವಾಗುವ ಕಾರಣ ಇಂಗ್ಲೆಂಡ್‍ನಲ್ಲಿಯೇ ಭಾರತ ಉಳಿದುಕೊಳ್ಳಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಮೊದಲೇ ಆರಂಭಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೊತೆಗೆ ಚರ್ಚಿಸಿ ಆಗಸ್ಟ್ ಮೂರನೇ ವಾರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯವಾಗುವಂತೆ ನೋಡಿಕೊಂಡರೆ ಅಕ್ಟೋಬರ್ ಆರಂಭಿಕ ವಾರದ ವಿಶ್ವಕಪ್ ಆಯೋಜನೆಗೂ ಮುನ್ನ ಕಾಲಾವಕಾಶ ದೊರೆಯಲಿದೆ.

ಇಸಿಬಿ ಜೊತೆಗೆ ಸಮನ್ವಯತೆ ಮುಖ್ಯ:

      ಸದ್ಯ ಐಪಿಎಲ್‍ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಕಾರಣ ವಿಶ್ವಕಪ್ ಕೂಡ ಯುಎಇನಲ್ಲಿಯೇ ನಡೆದರೆ ಅದಕ್ಕೂ ಮುನ್ನ ಐಪಿಎಲ್‍ಅನ್ನು ಕೂಡ ಯುಎಇಗೆ ಸ್ಥಳಾಂತರಿಸಿ ಆಯೋಜನೆ ಮಾಡುವ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆಯನ್ನು ನಡೆಸಬಹುದು. ಹೀಗಾಗಿ ಈ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರು ಕೂಡ ಐಪಿಎಲ್‍ನಿಂದ ವಿಶ್ವಕಪ್ ಬಯೋಬಬಲ್‍ಗೆ ಸ್ಥಳಾಂತರಗೊಳ್ಳುವ ಅವಕಾಶಗಳು ದೊರೆಯುತ್ತದೆ. ಇದಕ್ಕಾಗಿ ಬಿಸಿಸಿಐ ಇಸಿಬಿ ಜೊತೆಗೆ ಉತ್ತಮ ಸಮನ್ವಯತೆಯನ್ನು ಸಾಧಿಸಬೇಕಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap