ಸೂಪರ್ ಓವರ್‍ನಲ್ಲಿ ಮುಂಬೈ ಮಣಿಸಿದ ಆರ್‍ಸಿಬಿಗೆ ರೋಚಕ ಜಯ

ದುಬೈ

    ಅಪ್ಪಟ ಆರ್ ಸಿ ಬಿ ಅಭಿಮಾನಿಗಳಿಗೆ ಕೊನೆಗೂ ತಂಡ ಗೆಲುವಿನ ರಸದೌತಣ ನೀಡಿದೆ.ದುಬೈನಲ್ಲಿ ನಡೆದ ಕುತೂಹಲಕಾರಿ ಪಂದ್ಯದ ಸೂಪರ್ ಓವರ್ ನಲ್ಲಿ ಧಮಾಕಾ ಸಿಕ್ಕಿದೆ.

    ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಜಯ ಗಳಿಸಿದ ಆರ್‍ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಸೂಪರ್ ಓವರ್‍ನತ್ತ ಸಾಗಿತು.

   ಫಿಂಚ್, ಪಡಿಕ್ಕಲ್, ಎಬಿಡಿ ಅಬ್ಬರ: ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ 54 (40 ಎಸೆತ), ಆ?ಯರನ್ ಫಿಂಚ್ 52 (35 ಎಸೆತ), ಎಬಿ ಡಿವಿಲಿಯರ್ಸ್ 55 (24 ಎಸೆತ), ಶಿವಂ ದೂಬೆ 27 ರನ್ ಕೊಡುಗೆಯೊಂದಿಗೆ 20 ಓವರ್‍ಗೆ 3 ವಿಕೆಟ್ ಕಳೆದುಕೊಂಡು 201 ರನ್ ಭರ್ಜರಿ ಮೊತ್ತ ಕಲೆಹಾಕಿತು.

   ಕಿಶನ್, ಪೊಲಾರ್ಡ್ ರನ್ ಮಳೆ: ಗುರಿ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ 8, ಹಾರ್ದಿಕ್ ಪಾಂಡ್ಯ 15, ಇಶಾನ್ ಕಿಶನ್ 99… ಕೀರನ್ ಪೊಲಾರ್ಡ್ 60 ರನ್ ಸೇರಿಸಿದರು. ಮುಂಬೈ ತಂಡ 20 ಓವರ್‍ಗೆ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿ ಸಮನಾಗಿ ನಿಂತಿತು. ಕೊನೆಯ ಎಸೆತದಲ್ಲಿ ಐದು ರನ್ ಬೇಕಿದ್ದು ಪೊಲಾರ್ಡ್ ಬೌಂಡರಿ ಬಾರಿಸಿದರು. ಕೊನೆಯ ಐದು ಓವರ್ ನಲ್ಲಿ ಗೆಲ್ಲಲು ಮುಂಬೈಗೆ ತೊಂಭತ್ತು ರನ್ ಗಳು ಬೇಕಿದ್ದವು. ಅಬ್ಬರಿಸಿದ ಪೊಲಾರ್ಡ್ ರನ್ ಮಳೆಗೈದರು. ಇನ್ನೊಂದುಕಡೆ ಬ್ಯಾಟ್ ಬೀಸಿದ ಕಿಶನ್ ಕೇವಲ ಒಂದು ರನ್ ನಿಂದ ಶತಕ ತಪ್ಪಿಸಿಕೊಂಡರು.

 ಸೂಪರ್ ಓವರ್ ನಲ್ಲಿ ಆಯಿತು ಕುತೂಹಲಕಾರಿ ಮ್ಯಾಜಿಕ್:

   ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದು 7 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ರನ್ ಗಳಿಸಿ ವಿಜಯದ ನಗೆ ಬೀರಿತು. ಆರ್‍ಸಿಬಿ ಪರ ಸೈನಿ ಸೂಪರ್ ಓವರ್ ಬೌಲಿಂಗ್ ಮಾಡಿ ಕೇವಲ ಏಳು ರನ್ ನೀಡಿದರು. ಮುಂಬೈ ಪರ ಬುಮ್ರಾ ದಾಳಿಗೆ ಇಳಿದರೂ ಗೆಲುವು ಸಾಧ್ಯವಾಗಲಿಲ್ಲ. ಬುಮ್ರಾ ಈ ಹಿಂದೆ ಎಸೆದ ಸೂಪರ್ ಓವರ್ ಎಲ್ಲದರಲ್ಲಿ ಮುಂಬೈಗೆ ಗೆಲುವು ತಂದುಕೊಟ್ಟಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap