ಐಪಿಎಲ್ 2021 ಉಳಿದ ಪಂದ್ಯಗಳು ಯುಎಇಗೆ ಶಿಫ್ಟ್!!

ನವದೆಹಲಿ : 

      ಅರ್ಧಕ್ಕೆ ಸ್ಥಗಿತಗೊಂಡು, ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಐಪಿಎಲ್​-14ನೇ ಆವೃತ್ತಿ ಪುನಾರಂಭಗೊಳ್ಳಲಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ. 

      ವರ್ಚುವಲ್ ಆಗಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ (ಎಸ್‌ಜಿಎಂ) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದಸ್ಯರು ಐಪಿಎಲ್ ಅನ್ನು ಪುನರಾರಂಭಿಸಲು ಸರ್ವಾನುಮತದಿಂದ ಒಪ್ಪಿಕೊಂಡರು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. “ಐಸಿಸಿ ಟಿ20 ವಿಶ್ವಕಪ್ 2021 ನ ಆತಿಥ್ಯ ಕುರಿತು ನಿರ್ಧರಿಸಲು ಐಸಿಸಿ ನಿಂದ ಇನ್ನಷ್ಟು ಕಾಲಾವಕಾಶ ಕೋರಲು ಬಿಸಿಸಿಐ ಎಸ್‌ಜಿಎಂ ಒಪ್ಪಿಗೆ ಸೂಚಿಸಿತು” ಎಂದು ಶಾ ಹೇಳಿದರು.

     2021ರ ಐಪಿಎಲ್​ನಲ್ಲಿ 31 ಪಂದ್ಯಗಳು ಇನ್ನು ಬಾಕಿ ಇವೆ. ಈ ಪಂದ್ಯಗಳು ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 10ರ ನಡುವೆ ನಡೆಯಲಿವೆ. ಅರ್ಧಕ್ಕೆ ನಿಂತಿದ್ದ ಐಪಿಎಲ್​ ಪುನರಾರಂಭ ಸಂಬಂಧ ಇಂದು ಬಿಸಿಸಿಐ ಸ್ಪೆಷಲ್ ಜನರಲ್ ಮೀಟಿಂಗ್ (ಎಸ್​ಜಿಎಂ) ನಡೆಯಿತು. ಈ ಸಭೆಯಲ್ಲಿ ಐಪಿಎಲ್ ಮರುಆರಂಭಕ್ಕೆ ಅವಿರೋಧವಾಗಿ ಸದಸ್ಯರು ಅನುಮತಿ ನೀಡಿದರು.

      ಈ ವರ್ಷದಲ್ಲಿ ಭಾರತದಲ್ಲಿ ಮಾನ್ಸೂನ್ ಅವಧಿ ಎಂದು ಪರಿಗಣಿಸಲ್ಪಟ್ಟ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ವಿವೋ ಐಪಿಎಲ್ 2021 ಸರಣಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ನಡೆಯಲಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ. ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡ ಈ ಹಿಂದೆಯೇ ನಿರ್ಧರಿಸಲಾಗಿತ್ತು. ಅಲ್ಲದೇ, ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ನಿರ್ಧರಿಸಿದ್ದು ಬಾಕಿ ಉಳಿದಿರುವ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 18ರ ಆಸುಪಾಸಿನಲ್ಲಿ ಆರಂಭಿಸುವುದಾಗಿ ಮಾಹಿತಿ ರವಾನಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap