IPL 2022 : ಕಡಿಮೆ ರನ್​ ಟಾರ್ಗೆಟ್​ಗೂ ತಿಣುಕಾಡಿ ಗೆದ್ದ ಆರ್​ಸಿಬಿ

RCB vs KKR, IPL 2022:

ಲೋ ಸ್ಕೋರ್ ಗೇಮ್ ಆಗಿದ್ದರೂ ಆರ್​ಸಿಬಿ ಕೆಕೆಆರ್ ವಿರುದ್ಧದ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಬದಲು ತನ್ನ ಕೈಯಾರೆ ಜಟಿಲ ಮಾಡಿಕೊಂಡಿತು. ಕೊನೆಯ ಓವರ್ ವರೆಗೂ ಜಯ ಯಾರ ಮಡಿಲಿಗೆ ಎಂದು ಹೇಳಲು ಗೊಂದಲವಾಗಿಯೇ ಉಳಿಯಿತು.ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಐಪಿಎಲ್ 2022ರ (IPL 2022) ಆರನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB vs KKR) ತಂಡ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು.

 ಹೊಸ ಹಣಕಾಸು ವರ್ಷದ ಆರಂಭ : ನಾಳೆಯಿಂದ ಬದಲಾಗಲಿವೆ ಈ ನಿಯಮಗಳು

ಈ ಮೂಲಕ ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿನ ಆಘಾತದಿಂದ ಇದೀಗ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಲೋ ಸ್ಕೋರ್ ಗೇಮ್ ಆಗಿದ್ದರೂ RCB ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಬದಲು ತನ್ನ ಕೈಯಾರೆ ಜಟಿಲ ಮಾಡಿಕೊಂಡಿತು. ಕೊನೆಯ ಓವರ್ ವರೆಗೂ ಜಯ ಯಾರ ಮಡಿಲಿಗೆ ಎಂದು ಹೇಳಲು ಗೊಂದಲವಾಗಿಯೇ ಉಳಿಯಿತು. ಆದರೆ, 20ನೇ ಓವರ್​ನಲ್ಲಿ ನಡೆದ ಆ ಒಂದು ಘಟನೆ ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿ ಫಾಫ್  ಪಡೆಯ ಗೆಲುವಿಗೆ ಕಾರಣವಾಯಿತು. ಹಾಗಾದ್ರೆ ಏನದು ಘಟನೆ?, ಆ ಓವರ್​ನಲ್ಲಿ ಏನು ನಡೆಯಿತು ಎಂಬುದನ್ನು ನೋಡೋಣ.

ಕೊನೇಯ 6 ಎಸೆತಗಳಲ್ಲಿ ಆರ್​ಸಿಬಿ ಗೆಲುವಿಗೆ 7 ರನ್​​ಗಳ ಅವಶ್ಯಕತೆಯಿತ್ತು. ಕೆಕೆಆರ್​ಗೆ ಇತರೆ ಬೌಲಿಂಗ್ ಆಯ್ಕೆ ಇಲ್ಲದ ಕಾರಣ ಶ್ರೇಯಸ್ ಅಯ್ಯರ್ ಚೆಂಡು ಎಸೆಯಲು ಆಯಂಡ್ರೊ ರಸೆಲ್​ಗೆ ಹೇಳಿದರು. ಪಂದ್ಯ ಇಷ್ಟು ಕ್ಲೋಸ್ ಹೋಗುತ್ತೆ ಎಂದು ನಾಯಕ ಫಾಫ್ ಡುಪ್ಲೆಸಿಸ್​ಗೆ ತಿಳಿದಿತ್ತೇನೊ. ಅದಕ್ಕಾಗಿಯೆ ದಿನೇಶ್ ಕಾರ್ತಿಕ್ ಅವರನ್ನು ಕಾಯಿಸಿ ಕಾಯಿಸಿ ಪಂದ್ಯವನ್ನು ಫಿನಿಶ್ ಮಾಡಲು 7ನೇ ಕ್ರಮಾಂಕದಲ್ಲಿ ಕಳುಹಿಸಿದರು.

ಮೊದಲ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅಜೇಯ 32 ರನ್ ಚಚ್ಚಿದ್ದ ಕಾರ್ತಿಕ್ ಈ ಬಾರಿ ಕೂಡ ಮಿಸ್ ಮಾಡಲಿಲ್ಲ. ರಸೆಲ್ ಅವರ ಮೊದಲ ಎಸೆತದಲ್ಲೇ ಶಾರ್ಟ್​ ಬಾಲ್ ಅನ್ನು ಅರಿತು ಡೀಪ್ ಸ್ಕ್ವೇರ್​​ನಲ್ಲಿ ಚೆಂಡನ್ನು ಅದ್ಭುತವಾಗಿ ಸಿಕ್ಸರ್​ಗೆ ಅಟ್ಟಿ ಸ್ಕೋರ್ ಲೆವೆಲ್ ಮಾಡಿದರು. ಕಾರ್ತಿಕ್ ಸಿಡಿಸಿದ ಈ ಒಂದು ಸಿಕ್ಸ್ ಆರ್​​ಸಿಬಿ ಗೆಲುವಿಗೆ ಕಾರಣವಾಯಿತು. ನಂತರದ ಎಸೆತದಲ್ಲಿ ಬೌಂಡರಿ ಬಾರಿಸಿದ ಪರಿಣಾಮ ಫಾಫ್ ಪಡೆ ರೋಚಕ ಜಯ ಸಾಧಿಸಿತು.

128 ರನ್​ಗೆ ಕೆಕೆಆರ್ ಆಲೌಟ್:

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಿಂದಲೇ ರನ್ ಗಳಿಸಲು ಪರದಾಡಿತು. ವೆಂಕಟೇಶ್ ಅಯ್ಯರ್ 10 ರನ್‌ಗಳಿಗೆ ಆಕಾಶ್ ದೀಪ್‌ಗೆ ವಿಕೆಟ್ ಒಪ್ಪಿಸಿದರೆ, ಅನುಭವಿ ಓಪನರ್ ಅಜಿಂಕ್ಯಾ ರಹಾನೆ 9 ರನ್‌ಗೆ ನಿರ್ಗಮಿಸಿದರು. ಅಪಾಯಕಾರಿಯಾಗಿ ಗೋಚರಿಸಿದ ನಿತಿಶ್ ರಾಣಾ 12ರನ್‌ಗೆ ಔಟಾದರೆ, ಇದರ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಹಸರಂಗಗೆ ಮೊದಲ ವಿಕೆಟ್ ಒಪ್ಪಿಸಿದರು.

ತನ್ನ ಸ್ಪಿನ್ ಚಾಕಚಾಕತ್ಯೆಯಿಂದ ಲಂಕಾ ಸ್ಪಿನ್ನರ್ ಹಸರಂಗ ಸುನಿಲ್ ನರೈನ್ ಮತ್ತು ಶೆಲ್ಡನ್ ಜಾಕ್ಸನ್ ವಿಕೆಟ್ ಕೂಡ ಕಬಳಿಸಿದರು. ಸ್ಯಾಮ್ ಬಿಲ್ಲಿಂಗ್ (14), ಆಂಡ್ರೆ ರಸೆಲ್ (25) ವಿಕೆಟ್ ಪಡೆಯುವಲ್ಲಿ ಚಾಂಪಿಯನ್ ಬೌಲರ್ ಹರ್ಷಲ್ ಪಟೇಲ್ ಯಶಸ್ವಿಯಾದರು. ಕೆಕೆಆರ್ 18.5 ಓವರ್‌ಗಳಿಗೆ 128 ರನ್‌ಗಳಿಗೆ ಸರ್ವಪತನಗೊಂಡಿತು. ವಹಿಂದು ಹಸರಂಗ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು.

ಪ್ರಜಾಪ್ರಗತಿ ಯುಗಾದಿ ವಿಶೇಷಾಂಕ ಶುಭಕೃತಾದಿ ಬಿಡುಗಡೆ, ಸಚಿವ ಎಂಟಿಬಿ ಶಾಲಿನಿ ರಜನೀಶ್ ಸೇರಿ ಗಣ್ಯರ ಮೆಚ್ಚುಗೆ

129 ರನ್​ಗಳ ಗುರಿ ಹೊತ್ತು ಸ್ಕ್ರೀಜ್​ಗೆ ಬಂದಿದ್ದ ಆರ್​ಸಿಬಿ ನಾಯಕ ಫಾಪ್​ ಡುಪ್ಲೆಸಿಸ್​ ಹಾಗೂ ರಾವತ್​ ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿ ಕೂಡ ಶಾಕ್​ ಕೊಟ್ಟರು. ಈ ಸಂದರ್ಭ ಬೆಂಗಳೂರು ಪರ ರುದರ್‌ಫೋರ್ಡ್‌ (28), ಡೇವಿಡ್ ವಿಲ್ಲೆ (18) ಹೋರಾಟಕಾರಿ ಬ್ಯಾಟಿಂಗ್‌ ನಡೆಸಿದರು. 28 ಬಾಲ್​ಗಳಲ್ಲಿ 18 ರನ್​ಗಳಿಸಿದ ವಿಲ್ಲಿ ರಾಣಾಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು.

ವಿಲ್ಲಿ ಔಟ್​ ಆಗುತ್ತಿದ್ದಂತೆ ಸ್ಕ್ರೀಜ್​ಗೆ ಬಂದ ಶಹಬ್ಬಾಸ್ ಅಹಮದ್​ ತಾವು ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರು. ಶಹಬ್ಬಾಸ್​​ 20 ಬಾಲ್​ಗಳಲ್ಲಿ 27ರನ್​ಗಳಿಸಿ ಔಟ್​ ಆದರು. ಆದರೆ ಪಂದ್ಯವನ್ನು ಗೆಲ್ಲಿಸಿದ್ದು ಅಂತಿಮ ಕ್ಷಣದಲ್ಲಿ ದಿನೇಶ್‌ ಕಾರ್ತಿಕ್‌ ನಡೆಸಿದ ಹೋರಾಟಕಾರಿ ಬ್ಯಾಟಿಂಗ್‌. ಅವರು ಏಳೇ ಎಸೆತಗಳಲ್ಲಿ 14 ರನ್‌ ಚಚ್ಚಿ ಇನ್ನೂ 4 ಎಸೆತ ಬಾಕಿ ಇರುವಂತೆ ತಂಡಕ್ಕೆ ಗೆಲುವು ತಂದಿಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap