ನವದೆಹಲಿ
ಲಖನೌ ಸೂಪರ್ ಜಯಂಟ್ಸ್ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಂದಿದ್ದ ಕೆಎಲ್ ರಾಹುಲ್ , 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ ಬ್ಯಾಟ್ಸ್ಮನ್ ಆಗಿ ಆಡಿದ್ದರು. ಡೆಲ್ಲಿಗೆ ಬಂದಾಗ ಕೆಎಲ್ ರಾಹುಲ್ಗೆ ನಾಯಕತ್ವವನ್ನು ನೀಡಲು ಫ್ರಾಂಚೈಸಿ ಆಡಳಿತ ಮಂಡಳಿ ಬಯಸಿತ್ತು. ಆದರೆ, ಸ್ವತಃ ಕೆಎಲ್ ರಾಹುಲ್ ಅವರೇ ನಾಯಕತ್ವವನ್ನು ನಿರಾಕರಿಸಿದ್ದರು ಹಾಗೂ ಹಿರಿಯ ಬ್ಯಾಟ್ಸ್ಮನ್ ಆಗಿ ಆಡಲು ಬಯಸಿದ್ದರು. ನಂತರ ಅಕ್ಷರ್ ಪಟೇಲ್ಗೆ ನಾಯಕತ್ವವನ್ನು ನೀಡಲಾಗಿತ್ತು. ಅದರಂತೆ ನಾಯಕತ್ವದ ಒತ್ತಡವಿಲ್ಲದೆ ಕಳೆದ ಸೀಸನ್ನಲ್ಲಿ ಕನ್ನಡಿಗ 539 ರನ್ಗಳನ್ನು ಕಲೆ ಹಾಕಿದ್ದರು. ಇದೀಗ ಅವರು ತಮ್ಮ ಐಪಿಎಲ್ ನಾಯಕತ್ವದ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೆಎಲ್ ರಾಹುಲ್ ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳನ್ನು ಮುನ್ನಡೆಸಿದ್ದರು. ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ನಿರಾಕರಿಸಿದ್ದೇಕೆಂದು ಇತ್ತೀಚೆಗೆ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ನಾಯಕನಾದರೆ, ಕೇವಲ ಕೋಚ್ಗಳು ಅಥವಾ ಡ್ರೆಸ್ಸಿಂಗ್ ರೂಂಗೆ ಮಾತ್ರವಲ್ಲ, ತಂಡದ ಮಾಲೀಕರಿಂದಲೂ ಪ್ರಶ್ನೆಗಳನ್ನು ಎದುರಿಸಬೇಕು. ಮೈದಾನದಲ್ಲಿನ ಅಂಶಗಳು, ತಂತ್ರಗಳು ಹಾಗೂ ನಿರ್ಧಾರಗಳ ಬಗ್ಗೆ ಮಾಲೀಕರಿಗೂ ನೀಡಬೇಕೆಂಬುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
2024ರ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಅವರು ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಕೆಎಲ್ ರಾಹುಲ್ ಅವರನ್ನು ಈ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಮೈದಾನದಲ್ಲಿ ಪ್ರಶ್ನಿಸಿದ್ದರು ಹಾಗೂ ನಾಯಕನ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತದ ನಂತರ ಲಖನೌ ಫ್ರಾಂಚೈಸಿ ಮಾಲೀಕರನ್ನು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು.
“ಐಪಿಎಲ್ ಟೂರ್ನಿಯಲ್ಲಿ ನೀವು ನಾಯಕನಾದರೆ, ನಿಮ್ಮನ್ನು ನಿಯಮಿತವಾಗಿ ಪ್ರಶ್ನೆ ಮಾಡಲಾಗುತ್ತದೆ, ಎದುರಾಳಿ ತಂಡ 200 ರನ್ ಗಳಿಸಿದ್ದೇಕೆ? ನೀವು 120 ರನ್ ಗಳಿಸಿದ್ದೇಕೆ? ಅವರು ಹೆಚ್ಚು ಸ್ಪಿನ್ನರ್ಗಳನ್ನು ತೆಗೆದುಕೊಂಡಿದ್ದೇಕೆಂಬ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳ ಪೈಕಿ ಕೆಲವನ್ನು ನೀವು ವರ್ಷವೀಡಿ ಕೇಳುವುದಿಲ್ಲ. ಏಕೆಂದರೆ ಕೋಚ್ಗಳಿಗೆ ಈ ವಿಷಯಗಳು ಚೆನ್ನಾಗಿ ಗೊತ್ತಿರುತ್ತವೆ,” ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
2026ರ ಐಪಿಎಲ್ ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕೆಎಲ್ ರಾಹುಲ್ ಅವರನ್ನು ಉಳಿಸಿಕೊಂಡಿದೆ. ಕಳೆದ ಸೀಸನ್ನಂತೆ ಮುಂದಿನ ವರ್ಷವೂ ಅವರನ್ನು ವಿಶೇಷ ಬ್ಯಾಟ್ಸ್ಮನ್ ಆಗಿ ಬಳಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಎದುರು ನೋಡುತ್ತಿದೆ. 2025ರ ಟೂರ್ನಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ ಹಲವು ಬ್ಯಾಟಿಂಗ್ ಕ್ರಮಾಂಕಗಳಲ್ಲಿ ಆಡಿದ್ದರು. ಇದೀಗ ಮುಂದಿನ ಸೀಸನ್ನಲ್ಲಿಯೂ ಕೆಎಲ್ ರಾಹುಲ್ ಅವರಿಂದ ಇದೇ ಪಾತ್ರವನ್ನು ಟೀಮ್ ಮ್ಯಾನೇಜ್ಮೆಂಟ್ ನಿರೀಕ್ಷೆ ಮಾಡುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು: ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ರಾಣಾ, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಅಜಯ್ ಮಂಡಲ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮುಖೇಶ್ ಕುಮಾರ್, ದುಷ್ಮಂತವ್








