ಐಪಿಎಲ್‌ ಹರಾಜಿಗೆ ಫಿಕ್ಸ್‌ ಆಯಿತು ಮುಹೂರ್ತ…!

ದುಬೈ:

     18ನೇ ಆವೃತ್ತಿಯ ಐಪಿಎಲ್‌ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರ ಮತ್ತು ಸೋಮವಾರ ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲ 10 ಫ್ರಾಂಚೈಸಿಗಳು ಜೆಡ್ಡಾ ತಲುಪಿದೆ. ಪ್ರಮುಖ ಆಟಗಾರರನ್ನು ಖರೀದೀಸಲು ಮಾಸ್ಟರ್​ ಪ್ಲ್ಯಾನ್​ ರಚಿಸಿವೆ.

    ಮೆಗಾ ಹರಾಜಿನಲ್ಲಿ ಒಟ್ಟು 574 ಮಂದಿ ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಹರಾಜಿಗೆ 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಬಿಸಿಸಿಐ 574 ಮಂದಿ ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪೈಕಿ 366 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಅರ್ಷದೀಪ್‌ ಸಿಂಗ್‌ ಬಂಪರ್‌ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. 

   ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಹರಾಜಿನ ನೇರ ಪ್ರಸಾರವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಜತೆಗೆ ವೈಕಾಂ18 ಹಾಗೂ ರಿಲಯನ್ಸ್‌, ಡಿಜಿಟಲ್ ಹಕ್ಕು ಪಡೆದಿರುವುದರಿಂದಾಗಿ ಜಿಯೋ ಸಿನಿಮಾ ಆ್ಯಪ್​ ಮೂಲಕವೂ ಆಟಗಾರರ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ.

ತಂಡಗಳ ಬಳಿ ಇರುವ ಮೊತ್ತ ಎಷ್ಟು ….?

1. ಪಂಜಾಬ್‌ ಕಿಂಗ್ಸ್‌-110.5 ಕೋಟಿ ರೂ.,2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 83 ಕೋಟಿ ರೂ.,3. ಡೆಲ್ಲಿ ಕ್ಯಾಪಿಟಲ್ಸ್‌-73 ಕೋಟಿ ರೂ.,4. ಲಕ್ನೋ ಸೂಪರ್‌ ಜೈಂಟ್ಸ್‌-69 ಕೋಟಿ ರೂ.,5. ಗುಜರಾತ್‌ ಟೈಟಾನ್ಸ್‌- 69 ಕೋಟಿ ರೂ.,6. ಮುಂಬೈ ಇಂಡಿಯನ್ಸ್‌- 55 ಕೋಟಿ ರೂ.,7. ರಾಜಸ್ಥಾನ್‌ ರಾಯಲ್ಸ್‌-41ಕೋಟಿ ರೂ.,8. ಸನ್‌ರೈಸರ್ಸ್‌ ಹೈದರಾಬಾದ್‌-45 ಕೋಟಿ ರೂ.,9. ಚೆನ್ನೈ ಸೂಪರ್‌ ಕಿಂಗ್ಸ್‌-55 ಕೋಟಿ ರೂ.,10. ಕೋಲ್ಕತ್ತಾ ನೈಟ್‌ ರೈಡರ್ಸ್‌-51 ಕೋಟಿ ರೂ.

Recent Articles

spot_img

Related Stories

Share via
Copy link