ಮಾಜಿ ಶಾಸಕ ರಫೀಕ್ ಗೆ ತಪ್ಪಿದ ಕೈ ಟಿಕೆಟ್
ತುಮಕೂರು
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, 42 ಮಂದಿಯ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಮಾಡಿದ್ದು, ತುಮಕೂರು ನಗರದಿಂದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಇಕ್ಬಾಲ್ ಅಹಮದ್ ಅವರಿಗೆ ಟಿಕೆಟ್ ದೊರೆತಿದೆ.
ಇನ್ನು ಗುಬ್ಬಿ ಕ್ಷೇತ್ರದಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಚಿವ ಎಸ್. ಆರ್. ಶ್ರೀ ನಿವಾಸ್ ಅವರಿಗೆ ಟಿಕೆಟ್ ದೊರೆತಿದ್ದು, ತುಮಕೂರು ಗ್ರಾಮಾಂತರ ದ ಟಿಕೆಟ್ ಎರಡನೇ ಪಟ್ಟಿಯಲ್ಲೂ ಪ್ರಕಟವಾಗಿಲ್ಲ.ಪ್ರಮುಖವಾಗಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಮಾಜಿ ಶಾಸಕ ಡಾ. ರಫೀಕ್ ಅಹಮದ್ ಹಾಗೂ ಅಟ್ಟಿಕಾ ಬಾಬು, ಅತೀಕ್ ಅಹಮದ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಇವರ ಮುಂದಿನ ನಡೆ ಏನಾಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ