ಇಸ್ರೇಲ್‌ ಮೇಲೆ ಇರಾನ್ ದಾಳಿ…..!

ಬೈರೂತ್:

         ಇಸ್ರೇಲ್‌ ಮೇಲೆ ಇರಾನ್ ಏಕಕಾಲಕ್ಕೆ 200ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಇಸ್ರೇಲ್​ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್​​ನಿಂದ ಇಸ್ರೇಲ್‌ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ.ಹಮಾಸ್ ನಾಯಕರ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಟೆಲ್ ಅವೀವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್‌ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ.

    ಭಾರತೀಯ ಕಾಲಮಾನ ರಾತ್ರಿ 10:08ರ ಸುಮಾರಿಗೆ ಇಸ್ರೇಲ್‌ ರಕ್ಷಣಾಪಡೆಗಳ ಗುರಿಯಾಗಿಸಿ ಇರಾನ್‌ ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ.ಸದ್ಯ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ತಿಳಿದುಬಂದಿಲ್ಲ. ಇಸ್ರೇಲ್‌ನ ಪ್ರಸಿದ್ಧ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳಿಂದ ಕ್ಷಿಪಣಿಗಳನ್ನು ತಡೆಹಿಡಿಯಲು ಮುಂದಾಗಿದೆ. ಆದರೆ, ಜೆರು ಸಲೇಂ ಮತ್ತು ಇತರೆಡೆಗಳಲ್ಲಿ ಸ್ಫೋಟ ಸಂಭವಿಸಿವೆ.

    ಈ ನಡುವೆ ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ಮಾತನಾಡಿ, ಇಸ್ರೇಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು, ಎಲ್ಲಾ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ತಿಳಿಸಿದ್ದಾರೆ.ಇಸ್ರೇಲ್ ವಾಯುಪಡೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಪ್ರಮುಖ ನಾಯಕರನ್ನು ಹತ್ಯೆಗೈದ ಬಳಿಕ ಇಸ್ರೇಲ್-ಇರಾನ್ ನಡುವಿನ ಯುದ್ಧ ಸ್ವರೂಪವು ಮತ್ತಷ್ಟು ತೀವ್ರಗೊಂಡಿದೆ.

    ಈ ನಡುವೆ ಇರಾನ್ ಕೂಡ ಟೆಹ್ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಇರಾನ್ ಮಾಧ್ಯಮಗಳು ಮಂಗಳವಾರ ತಡರಾತ್ರಿ ವರದಿ ಮಾಡಿವೆ.ವಿಮಾನ ನಿಲ್ದಾಣದ ಮುಖ್ಯಸ್ಥ ಸೈದ್ ಚಲಂದರಿ ಅವರು ಮಾತನಾಡಿ, ಸದ್ಯಕ್ಕೆ ನಾವು ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ಸ್ಥಗಿತಗೊಳಿಸಿದ್ದೇವೆಂದು ತಿಳಿಸಿದ್ದಾರೆ.

    ನಮ್ಮ ದಾಳಿ ಹುತಾತ್ಮರ ರಕ್ತಕ್ಕೆ ಪ್ರತೀಕಾರವಾಗಿದೆ. ಕ್ಷಿಪಣಿ ದಾಳಿಗೆ ಇರಾನ್ ಪ್ರತಿದಾಳಿಗೆ ಮುಂದಾಗಿದ್ದೇ ಆದರೆ, ನಮ್ಮ ಮುಂದಿನ ನಡೆ ಕಠಿಣವಾಗಿರುತ್ತದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ.ಇರಾನ್ ಮತ್ತು ಹಿಜ್ಬುಲ್ಲಾ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಅವುಗಳನ್ನು ಬೆಂಬಲಿಸುವ ಸೇನಾಪಡೆಗಳ ವಿರುದ್ಧದ ಸರಣಿ ದಾಳಿ ನಡೆದಿತ್ತು. ಇದಕ್ಕೆ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್​ ಪ್ರತಿಜ್ಞೆ ಮಾಡಿತ್ತು.

   ಇದರ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿತ್ತು.ಈ ದಾಳಿಯ ವಿರುದ್ಧ ಇಸ್ರೇಲ್ ಅನ್ನು ರಕ್ಷಿಸಲು ನಾವು ರಕ್ಷಣಾತ್ಮಕ ಸಿದ್ಧತೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಅಂತಹ ಕ್ರಮವು ಇರಾನ್‌ಗೆ ತೀವ್ರ ಪರಿಣಾಮಗಳನ್ನು ಬೀರುತ್ತದೆ ಎಂದೂ ಎಚ್ಚರಿಸಿದ್ದರು.

Recent Articles

spot_img

Related Stories

Share via
Copy link