ಇಸ್ರೇಲ್‌ ಮೇಲೆ ದಾಳಿ ಮುಸ್ಸೂಚನೆ ನೀಡಿದ ಇರಾನ್‌

ಸಿರಿಯಾ

    ತನ್ನ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ನಿಂದ ಶಂಕಿತ ದಾಳಿ ನಡೆದಿದ್ದು ತಾನೂ ಇಸ್ರೇಲ್ ವಿರುದ್ಧ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾಗೆ ಹಿಂದೆಸರಿಯುವಂತೆಯೂ ಸಿರಿಯಾ ಸಲಹೆ ನೀಡಿದೆ. 

    ಇನ್ನು ಇದೇ ವೇಳೆ ಇರಾನ್ ನ ಹೆಜ್ಬುಲ್ಲಾ ಸಂಘಟನೆ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಸನ್ನದ್ಧವಾಗುತ್ತಿರುವುದಾಗಿ ಹೇಳಿದೆ. ಈ ಬಗ್ಗೆ ವಾಷಿಂಗ್ ಟನ್ ಗೆ ಸಂದೇಶ ರವಾನಿಸಿರುವ ಇರಾನ್, ನೆತನ್ಯಾಹು ಅವರ ಬಲೆಗೆ ಬೀಳದಂತೆ ಅಮೇರಿಕಾಗೆ ಸಲಹೆ ನೀಡಿದೆ.

   ಇರಾನ್ ಅಧ್ಯಕ್ಷರ ರಾಜಕೀಯ ವ್ಯವಹಾರಗಳ ಉಪ ಮುಖ್ಯಸ್ಥರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಬರೆದಿದ್ದಾರೆ. ಯುಎಸ್ “ನಿಮಗೆ ಹೊಡೆತ ಬೀಳದಂತೆ ಪಕ್ಕಕ್ಕೆ ಸರಿಯಬೇಕು ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೇರಿಕಾ, ಯುಎಸ್ ನ್ನು ಗುರಿಯಾಗಿಸಿ ದಾಳಿ ಮಾಡದಂತೆ ಇರಾನ್‌ಗೆ ಎಚ್ಚರಿಸಿದೆ ಎಂದು ಹೇಳಿದ್ದಾರೆ. ಇರಾನ್ ಕಳುಹಿಸಿರುವ ಸಂದೇಶದ ಬಗ್ಗೆ ಅಮೆರಿಕ ಈ ವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap