ಟೀ ನಿಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಎಂದು ನಿಮಗೆ ಗೊತ್ತಾ…..?

ತುಮಕೂರು :

    ತಲೆ ನೋವು ಎಂದು ಹೇಳಿದಾಕ್ಷಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕೇಳಿ ಬರುವ ವಾಕ್ಯವೆಂದರೆ ಬಾ ಟೀ ಕುಡಿ ತಲೆನೋವು ಹೋಗುತ್ತೆ ಅನ್ನುತ್ತಾರೆ. ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ.

ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

ಅವರವರ ರುಚಿ ಮತ್ತು ಆರೋಗ್ಯಕ್ಕೆ ತಕ್ಕಂತೆ ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ, ಹಾಲಿನ ಟೀ ಕುಡಿಯುತ್ತಾರೆ. ಹೆಚ್ಚಿನವರು ಹಾಲಿನ ಚಹಾವನ್ನು ಇಷ್ಟಪಡುತ್ತಾರೆ. ನಾನಾ ಬಗೆಯ ಟೀಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇನ್ನು ಚಹಾ ಸೇವಿಸುವುದರಿಂದ ತಲೆನೋವನ್ನು ಕಡಿಮೆ ಮಾಡುತ್ತದೆ ಎಂದು ಎಷ್ಟೋ ಮಂದಿ ನಂಬಿದ್ದಾರೆ.

ಆದರೆ, ವಾಸ್ತವವಾಗಿ ಚಹಾದಲ್ಲಿರುವ ಕೆಫೀನ್, ಅದರ ಪ್ರಮಾಣಕ್ಕೆ ಅನುಗುಣವಾಗಿ ತಲೆನೋವನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಹೀಗಾಗಿ ಸಂಶೋಧಕರು, ಕೆಫೀನ್ ಸೇವನೆ ಸೀಮಿತಗೊಳಿಸಬೇಕು ಎನ್ನುತ್ತಾರೆ. ತಲೆನೋವಿನಿಂದ ಪರಿಹಾರ ಪಡೆಯಲು ಕೆಫೀನ್ ಅನ್ನು ಔಷಧಿಯಾಗಿ ಬಳಸುವುದನ್ನು ತಪ್ಪಿಸಲು ತಜ್ಞರು ಸೂಚಿಸುತ್ತಾರೆ.

ತಲೆನೋವು ಪರಿಹಾರಕ್ಕಾಗಿ ನೀವು ಕೆಫೀನ್ ಮುಕ್ತ ಗಿಡಮೂಲಿಕೆ ಚಹಾವನ್ನು ತೆಗೆದುಕೊಳ್ಳುವುದು ಉತ್ತಮ. ಹರ್ಬಲ್ ಟೀಗಳಲ್ಲಿ ಶುಂಠಿ ಕೂಡ ಇರುತ್ತದೆ. ಶುಂಠಿ ಟೀ ಕುಡಿಯುವುದರಿಂದ ಮೈಗ್ರೇನ್ ಸಮಸ್ಯೆ ನಿವಾರಣೆಯಾಗುತ್ತದೆ. ಶುಂಠಿ ಚಿಕಿತ್ಸೆಯನ್ನು ಪ್ಲಸೀಬೊ ಚಿಕಿತ್ಸೆಗೆ ಹೋಲಿಸಿದರೆ ರೋಗಿಗಳನ್ನು ಎರಡು ಗಂಟೆಗಳಲ್ಲಿ ನೋವು-ಮುಕ್ತಗೊಳಿಸುತ್ತದೆ. ಪ್ಲಸೀಬೊ ಚಿಕಿತ್ಸೆಗೆ ಹೋಲಿಸಿದರೆ ಶುಂಠಿಯು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 

ಶುಂಠಿ ಚಹಾದೊಂದಿಗೆ, ಪುದೀನಾ ಮತ್ತು ಲವಂಗ ಚಹಾದಂತಹ ಗಿಡಮೂಲಿಕೆ ಚಹಾಗಳು ಸಹ ತಲೆನೋವಿನಿಂದ ಪರಿಹಾರವನ್ನು ನೀಡುತ್ತವೆ. ಚಹಾವನ್ನು ಎಷ್ಟು ಇಷ್ಟ ಪಡುತ್ತೀರೋ ಆದಷ್ಟು ಅದನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಕೂಡ ತಲೆನೋವಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಅತಿಯಾಗಿ ಟೀ ಕುಡಿಯುವುದರಿಂದ ನಿದ್ರೆಯ ಸಮಸ್ಯೆ, ಕಬ್ಬಿಣಾಂಶದ ಕೊರತೆ, ಹೊಟ್ಟೆ ಉರಿ ಮತ್ತು ತಲೆ ಸುತ್ತು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. (ಏಜೆನ್ಸೀಸ್​)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap