ಶಕ್ತಿ ಯೋಜನೆ : ಸುಸ್ತಾದ್ರಾ ಮಹಿಳಾ ಪ್ರಯಾಣಿಕರು…!

ಬೆಂಗಳೂರು:

     ವಾರಾಂತ್ಯದಲ್ಲಿ ಲಾಂಗ್ ಟ್ರಿಪ್ ಹೊರಟಿದ್ದ ಮಹಿಳಾಮಣಿಯರು ಇಂದು ಬೆಚ್ಚಗೆ ಮನೆಯಲ್ಲೇ ಕುಳಿತ್ತಿದ್ದಾರೆ.ಹೀಗಾಗಿ ಧರ್ಮಸ್ಥಳ, ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಯ ಬಸ್​ಗಳಿಗೆ ಬರಲು ಮಹಿಳೆಯರೇ ಇಲ್ಲ‌ದಂತಾಗಿದೆ ಕಳೆದ ವಾರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣದಲ್ಲಿ ಇಂದು ಮಹಿಳಾ ಪ್ರಯಾಣಿಕರು ಕಾಣಿಸುತ್ತಿಲ್ಲ. ಬಸ್​ಗಳೇ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

     ಕಳೆದ ವಾರದ ಪರಿಸ್ಥಿತಿ ಕಂಡ ಅಧಿಕಾರಿಗಳು ಈ ವಾರವೂ ಅಂತಹುದೇ ಸಮಸ್ಯೆ ಕಾಣಬಹುದೆಂಬ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಕೆಎಸ್​ಆರ್​ಟಿಸಿ, ರಾಜಹಂಸ, ಓಲ್ವೋ ಗಳನ್ನ ನಿಯೋಜಿಸಿದ್ದರು.ಆದರೀಗ ಕಳೆದ ವಾರಕ್ಕಿಂತ ಭಿನ್ನ ಸ್ಥಿತ ನಿರ್ಮಾಣವಾಗದ್ದು, ಎರಡನೇ ವೀಕೆಂಡ್​ಗೆ ಮಾಮೂಲಿ ದಿನಗಳಂತೆ ಬಸ್​ಗಳು ಖಾಲಿ‌ಖಾಲಿಯಾಗಿವೆ.

     ಹೀಗಿದ್ದರೂ ಭಾನುವಾರ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.ಕಳೆದ ವಾರ ಕೆಲವು ಮಾರ್ಗದ ಬಸ್​ಗಳಲ್ಲಿ ನಿಲ್ಲಲು ಸಾಧ್ಯವಾಗದಷ್ಟು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಬಸ್​ನಲ್ಲಿ ಸೀಟ್ ಹಿಡಿಯಲು ಕಿಟಕಿ ಮೂಲಕ ಮಹಿಳೆಯರು ಒಳಗೆ ತೆರಳುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap