ರಷ್ಯಾ:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವಾಗ ಅಣ್ವಸ್ತ್ರ ದಾಳಿ ಮಾಡುವ ನೇರ ಬೆದರಿಕೆ ಹಾಕಿದ್ದಾರೋ, ಅಲ್ಲಿಗೆ ರಷ್ಯಾವೂ ಸೇರಿ ವಿವಿಧ ದೇಶಗಳಲ್ಲಿ ಅವರ ಕುರಿತು ಅಸಹನೆ ಹೆಚ್ಚಾಗಿದೆ. ಈ ಭಾವನೆಯನ್ನು ಅಮೆರಿಕದ ಸೆನೇಟರ್ ಲಿಂಡ್ಸೆ ಗ್ರಹಾಮ್ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
“ಇವೆಲ್ಲ ಹೇಗೆ ಮುಗಿಯುತ್ತದೆ? ರಷ್ಯಾದಲ್ಲಿರುವ ಯಾರಾದರೂ ಧೈರ್ಯ ಮಾಡಿ ಮುಂದಡಿಯಿಡಿ, ಆ ಮನುಷ್ಯನನ್ನು ಮುಗಿಸಿಬಿಡಿ’ ಎಂದು ಟೀವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲ ಸರಣಿ ಟ್ವೀಟ್ ಮಾಡಿ, ರಷ್ಯಾದಲ್ಲಿ ಯಾರಾದರೂ ಬ್ರೂಟಸ್ (ರೋಮ್ ಚಕ್ರವರ್ತಿ ಜೂಲಿಯಸ್ ಸೀಸರ್‌ನನ್ನು ಕೊಂದಾತ)ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ. ರಷ್ಯಾ ಯೋಧರಲ್ಲಿ ಇಂತಹವರು ಯಾರಾದರೂ ಇದ್ದೀರಾ ಎಂದೂ ಕೇಳಿದ್ದಾರೆ. ಇವರ ಮಾತುಗಳು ಬಹಳ ಚರ್ಚೆಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ