ನಿಟ್ಟೂರು:
ಅರಣ್ಯ ತಾಣ ಅಚ್ಚುಕಟ್ಟು ಮಾಡಿಸದ ಕುರುಡು ಹೇಮಾವತಿ ಇಲಾಖೆ
ನವೆಂಬರ್ 30 ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಪ್ರಮುಖ ದೊಡ್ಡ ನಿಟ್ಟೂರು ಕೆರೆ ಏರಿ ಮೇಲೆ ಕೆಳಗೆ ದಟ್ಟವಾಗಿ ಗಿಡಗಳು ಬೆಳೆದು ಅರಣ್ಯ ರೂಪತಾಳಿದೆ. ನಿಟ್ಟೂರು ಕೆರೆ ಏರಿ ಮೈತುಂಬಾ ಗಿಡಗಳು ಆವರಿಸಿಕೊಂಡಿದ್ದು ಆಪತ್ತಿನ ಘಳಿಗೆ ಬಂದರೆ ಮುಂದೇನು ಗತಿ ಎಂದು ಭಯದ ಸುಳಿಯಲ್ಲಿ ಗ್ರಾಮದ ಗ್ರಾಮಸ್ಥರು ಸಿಲುಕಿದ್ದಾರೆ.
ನಿಟ್ಟೂರು ಕೆರೆ ಹೇಮಾವತಿ ನೀರಿನಿಂದ ಭರ್ತಿಯಾಗಿ ಕೋಡಿಬೀಳುತ್ತದೆ ಕೆರೆಗೆ 2 ತೂಬುಗಳಿವೆ . ಭರ್ತಿಯಾದ ಹೇಮಾವತಿ ನೀರನ್ನು ರೈತರ ತೋಟಗಳಿಗೆ ಗದ್ದೆ ಬಯಲಿಗೆ ಕೃಷಿ ಚಟುವಟಿಕೆಳಿಗೆ ನೀರು ಹರಿಸಲಾಗಿತ್ತು. ಕೆಲ ವರ್ಷಗಳಿಂದ ಹೇಮಾವತಿ ನೀರು ಹರಿಸಲು ಸಾಧಾರಣವಾಗಿದೆ, ನಿಟ್ಟೂರು ಗ್ರಾಮಸ್ಥರಲ್ಲಿ ಬಹುದೊಡ್ಡ ಅಘಾತಕಾಡುತ್ತಿರುವುದು ಕೆರೆ ಏರಿ ಮೈತುಂಬಾ ದಟ್ಟವಾಗಿ ಬೆಳೆದು ನಿಂತಿರುವ ಗಿಡಗಳಿಂದ ಅಪಾಯವಾಗಬಹುದೇ ಎಂಬ ಚಿಂತನೆಗಳು ಗ್ರಾಮಸ್ಥರ ವಲಯದಲ್ಲಿ ಚರ್ಚೆಗಳು ಹಬ್ಬಿವೆ.
ತುಂಬಾ ವರ್ಷಗಳಿಂದ ಅರಣ್ಯ ಪ್ರದೇಶದಂತೆ ಗಿಡಗಳಿಂದ ಕೂಡಿರುವ ನಿಟ್ಟೂರು ಕೆರೆ ಏರಿಯ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗದ ಹೇಮಾವತಿ ಇಲಾಖಾಧಿಕಾರಿಗಳ ವಿರುದ್ದ ಗ್ರಾಮಸ್ಥರು ಕಿಡಿಕಾರಿದ್ದರೆ ವರುಣನ ಆರ್ಭಟ ಹೀಗೆಯೇ ಮುಂದುವರೆದರೆ ನಿಟ್ಟೂರು ಕೆರೆ ಏರಿ ಹೊಡೆದು ಪ್ರಾಣಹಾನಿ, ಬೆಳೆಹಾನಿ , ಸ್ಥಳೀಯ ಮನೆಗಳು ನೀರಿಗಾಹುತಿಯಾದರೆ ಜನರ ಪಾಡೇನು ಎಂಬ ಆತಂಕದಲ್ಲಿದ್ದಾರೆ.
ತಕ್ಷಣ ಹೇಮಾವತಿ ಇಲಾಖಾಧಿಕಾರಿಗಳು ಅಂಧಕಾರದಿಂದ ಹೊರಬಂದು ನಿಟ್ಟೂರು ಕೆರೆ ಏರಿ ಮೇಲಿನ ಬೆಳೆದು ನಿಂತ ದಟ್ಟವಾದ ಗಿಡಗಳನ್ನು ನಾಶಪಡಿಸಿ ಅಚ್ಚುಕಟ್ಟುಮಾಡಿಸಿ ಅಪಾಯದಂಚಿನಲ್ಲಿರುವ ನಿಟ್ಟೂರು ಕೆರೆಯನ್ನು ರಕ್ಷಣೆ ಮಾಡಬೇಕೆಂದು ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
