ದೇಶದಲ್ಲಿ ಆನ್ಲೈನ್ ವಂಚಕರ ಬಳಗ ದಿನೇ ದಿನೇ ಹೊಸ ತಂತ್ರಗಳನ್ನು ತಮ್ಮ ಕಸುಬಿಗೆ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೀಗೆ ವಂಚನೆ ಎಸಗುವವರ ಕಾಟವೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ನೀವು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರಾಗಿದ್ದು, ಎಂಬ ಎಸ್‌ಎಂಎಸ್ ಒಂದು ನಿಮ್ಮ ಮೊಬೈಲ್‌ಗೆ ಬಂದಿರಬಹುದು ಅಥವಾ ಬರಲೂಬಹುದು.
“ನಿಮ್ಮ ಖಾತೆಗೆ ಲಗತ್ತಿಸುವ ದಾಖಲೆಗಳ ವಾಯಿದೆ ಮುಗಿದಿದ್ದು, ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ನಿಮ್ಮ ದಾಖಲೆಯನ್ನು ಈಗಲೇ ಅಪ್ಡೇಟ್ ಮಾಡಿ,”
ಎಂಬ ಅರ್ಥದ ಈ ಎಸ್‌ಎಂಎಸ್ ಓದುವ ಖಾತೆದಾರರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿ, ಆ ಎಸ್‌ಎಂಎಸ್‌ನಲ್ಲಿರುವ ಲಿಂಕ್ ಒತ್ತಿಬಿಡುವ ಸಾಧ್ಯತೆ ಇರುತ್ತದೆ.
ನೀವು ಯಾವ ಕಾರಣಕ್ಕೂ ಅಂಥ ಲಿಂಕ್‌ಗಳನ್ನು ಒತ್ತಬೇಡಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಿಐಬಿ ವಾಸ್ತವಾಂಶ ಸಾರುವ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.
“ನಿಮ್ಮ ಎಸ್‌ಬಿಐ ಖಾತೆಯನ್ನು ಬ್ಲಾಕ್ ಮಾಡಿರುವುದಾಗಿ ಹೇಳುವ ಸಂದೇಶವೊಂದು ಸುತ್ತು ಹೊಡೆಯುತ್ತಿದ್ದು ಇದು ನಕಲಿ. ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೇಳುವ ಯಾವುದೇ ಇ-ಮೆಲ್/ಎಸ್‌ಎಂಎಸ್‌ಗೆ ಪ್ರತಿಕ್ರಿಯೆ ನೀಡಬೇಡಿ.
ಇಂಥ ಯಾವುದೇ ಸಂದೇಶವನ್ನು ನೀವು ಸ್ವೀಕರಿಸಿದಲ್ಲಿ, ಕೂಡಲೇ ಅದನ್ನು [email protected]ಗೆ ವರದಿ ಮಾಡಿ” ಎಂದು ಪಿಐಬಿ ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದೆ.
ಲಾಟರಿ, ಕೆವೈಸಿ ಅಪ್ಡೇಟ್, ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ನೆಪದಲ್ಲಿ ಕಳ್ಳರು ಬ್ಯಾಂಕ್ ಖಾತೆಗಳಿಂದ ದುಡ್ಡು ಲೂಟಿ ಹೊಡೆಯುತ್ತಿರುವುದು ಭಾರತದಲ್ಲಿ ಸಾಮಾನ್ಯವಾಗಿದೆ.
ಫಿಶಿಂಗ್ ಎಂದು ಕರೆಯಲಾಗುವ ಇಂಥ ವಂಚಕ ಜಾಲಗಳ ಮೂಲಕ ಮುಖ್ಯವಾದ ಐಡಿ/ಪಾಸ್ವರ್ಡ್‌ಗಳನ್ನೂ ಕದಿಯಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ