ರಣಬೀರ್‌ ಫಿಲಂನಲ್ಲಿ ಯಶ್‌ ವಿಲನ್‌…?

ಬೆಂಗಳೂರು:

     ವೆಬ್ ತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿರುವ ಸುದ್ದಿಯೆಂದರೆ ರಾಕಿಂಗ್ ಸ್ಟಾರ್ ತಯಶ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಾಯಕ ಹಾಗೂ ನಾಯಕಿಯಾಗಿ ನಟಿಸಲಿರುವ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಲಿದ್ದಾರೆ ಎಂಬುದು.

     ದಂಗಲ್ ಹಾಗೂ ಚಿಚ್ಚೋರೆ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲಿರುವ ‘ರಾಮಾಯಣ್’ ಚಿತ್ರದಲ್ಲಿ ಯಶ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

     ಇನ್ನು ಚಿತ್ರತಂಡ ಈ ರೀತಿಯ ಚಿಂತನೆಯನ್ನು ನಡೆಸಿದ್ದು, ಯಶ್ ಅವರನ್ನು ಆದಷ್ಟು ಬೇಗ ಭೇಟಿ ಮಾಡಿ ಚರ್ಚಿಸಲಿದೆ ಎಂಬ ಸುದ್ದಿ ಸಹ ಹರಿದಾಡಿತ್ತು. ಇನ್ನು ಈ ಸುದ್ದಿ ಹರಿದಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಯಶ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಈ ಯೋಜನೆಗೆ ಒಪ್ಪಿಗೆ ಸೂಚಿಸಬೇಡಿ ಎಂದು ತಮ್ಮ ನೆಚ್ಚಿನ ನಟನ ಬಳಿ ಮನವಿ ಮಾಡಿಕೊಂಡರು.

    ಮೊದಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ವರ್ಷ ಕಳೆದರೂ ಯಶ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಮಾಹಿತಿ ಸಿಗದಿದ್ದ ಅಭಿಮಾನಿಗಳು ಈ ಸುದ್ದಿ ಕೇಳಿದ ಮೇಲಂತೂ ಇನ್ನೂ ಬೇಸರಗೊಂಡರು. ನೇರವಾಗಿ ಯಶ್ ಅವರ ಟ್ವಿಟರ್ ಖಾತೆಯನ್ನು ಉಲ್ಲೇಖಿಸಿ ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಒಪ್ಪಿಕೊಳ್ಳಬೇಡಿ ಎಂದು ಬೇಡಿಕೆ ಇಟ್ಟಿದ್ದರು.

    ಇದಕ್ಕೆ ಯಶ್ ಆಗಲಿ ಅಥವಾ ಯಶ್ ತಂಡವಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಫಿಲ್ಮಿ ಫೀವರ್ ಎಂಬ ಸಿನಿಮಾ ವೆಬ್ ತಾಣ ಈ ಕುರಿತು ಸುದ್ದಿಯನ್ನು ಪ್ರಕಟಿಸಿದ್ದು, ‘ರಾಕಿಂಗ್ ಸ್ಟಾರ್ ಯಶ್ ಅವರು ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರ ನಿರ್ವಹಿಸಲು ನಿರಾಕಿರಿಸಿದ್ದಾರೆ’ ಬರೆದುಕೊಂಡಿದೆ.

    ಮೂಲಗಳ ಪ್ರಕಾರ ಯಶ್ ಅವರು ರಾವಣನ ಪಾತ್ರ ನಿರ್ವಹಿಸುವುದು ನಿಮ್ಮ ಅಭಿಮಾನಿಗಳಿಗೆ ಇಷ್ಟವಿಲ್ಲ, ರಾವಣನಷ್ಟೇ ಬಲಿಷ್ಟವಾದ ಮತ್ಯಾವುದೇ ಖಳ ನಾಯಕನ ಪಾತ್ರ ಮಾಡಿದರೂ ಸಹ ಅವರಿಗೆ ಇಷ್ಟವಾಗುವುದಿಲ್ಲ ಎಂದು ಯಶ್ ಆಪ್ತ ವಲಯ ಯಶ್ ಅವರಿಗೆ ತಿಳಿಸಿದೆ ಎಂಬ ಮಾಹಿತಿ ಇದೆ. ಇನ್ನು ಇದಕ್ಕೂ ಮುನ್ನ ಸ್ವಲ್ಪ ದಿನದ ಹಿಂದೆ ನಡೆದಿದ್ದ ಸಂದರ್ಶನವೊಂದರಲ್ಲಿ ಯಶ್ “ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ತುಂಬಾ ಜಾಗರೂಕನಾಗಿರಬೇಕು.

   ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ ಮತ್ತು ನಾನು ಅವರ ಇಚ್ಛೆಗೆ ವಿರುದ್ಧವಾಗಿ ಹೋದಾಗ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ” ಎಂದು ಹೇಳಿದ್ದರು. ಈ ಹೇಳಿಕೆಯ ರೀತಿಯೇ ಈಗಲೂ ಯಶ್ ಅಭಿಮಾನಿಗಳ ಆಸೆಯಂತೆ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸದಿರಲು ನಿರ್ಧರಸಿದ್ದಾರೆ ಎಂದು ತಂಡ ತಿಳಿಸಿದೆ ಎಂದು ವರದಿ ಮಾಡಿದೆ.

   ಈ ಸುದ್ದಿ ವೀಕ್ಷಿಸಿದ ಯಶ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ತಮ್ಮ ನೆಚ್ಚಿನ ನಟ ತಮ್ಮ ಇಚ್ಛೆಯ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap