ನನ್ನ ತಂದೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’: ಇಶಾ ಡಿಯೋಲ್

ಮುಂಬೈ: 

    ಬಾಲಿವುಡ್ ಶೋ ಮ್ಯಾನ್ ಧರ್ಮೇಂದ್ರ ಅವರು ಇಂದು ಬೆಳಗ್ಗೆ ಉಸಿರಾಟ ಸಮಸ್ಯೆಯಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವದಂತಿ ಹಬ್ಬಿ ಮಾಧ್ಯಮಗಳಲ್ಲೆಲ್ಲಾ ಸುದ್ದಿಯಾಗಿತ್ತು.

    ಅವರ ಪುತ್ರಿ ನಟಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದು, ನಮ್ಮ ತಂದೆಯ ಆರೋಗ್ಯ ಬಗ್ಗೆ ಮಾಧ್ಯಮಗಳು ಅತಿರೇಕದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.ಧರ್ಮೇಂದ್ರ ಅವರ ಕುಟುಂಬ ವರ್ಗವಾಗಲಿ, ಆಸ್ಪತ್ರೆಯ ವೈದ್ಯರಾಗಲಿ ಇದುವರೆಗೆ ಹೇಳಿಕೆ ನೀಡಿಲ್ಲ. ಆದರೂ ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

   ಧರ್ಮೇಂದ್ರ ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಿರಿಯ ಹೃದ್ರೋಗ ತಜ್ಞ ಡಾ. ದೇವ್ ಪಹ್ಲಜಾನಿ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

Recent Articles

spot_img

Related Stories

Share via
Copy link