ಇಸ್ಲಾಮಾಬಾದ್:

ಆರ್ಥಿಕ ದಿವಾಳಿಯತ್ತ ನುಗ್ಗುತ್ತಿರುವ ಪಾಕಿಸ್ತಾನ ಭಾರತವನ್ನು ಕೇಳಿಕೊಂಡಂತೆ ಭಾರತ-ಪಾಕ್ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿರುವ ಬಗ್ಗೆ ಪಾಕಿಸ್ತನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಕಂಗಾಲಾಗಿ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ, ” ಭಾರತ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ. ಮಾತುಕತೆ ರದ್ದುಗೊಳಿಸುವುದಕ್ಕೆ ಭಾರತ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ಬಿಎಸ್ ಎಫ್ ಯೋಧರ ಹತ್ಯೆ ಹಿಂದೆ ನಮ್ಮ ಕೈವಾಡವೇನು ಇಲ್ಲ” ಎಂದು ಪಾಕಿಸ್ತಾನ ಸಮಜಾಯಿಶಿ ಕೊಟ್ಟಿದೆ.
ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರ ಸಮಸ್ಯೆ ಉಲ್ಬಣವಾಗುತ್ತಿದ್ದು, ಪೊಲೀಸರನ್ನು ಪಾಕಿಸ್ತಾನಿ ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೆ ಭಾರತ, ಪಾಕಿಸ್ತಾನದೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿತ್ತು. ಭಾರತ ಮಾತುಕತೆ ರದ್ದುಗೊಳಿಸಿದ್ದಕ್ಕೆ ಕಾರಣ ಎಂದು ಹೇಳುತ್ತಿರುವ ಘಟನೆಗಳು,ಮಾತುಕತೆಗೆ ಒಪ್ಪಿಗೆ ಸೂಚಿಸುವ ಮುಂಚೆಯೇ ನಡೆದಿದ್ದ ಘಟನೆಗಳಾಗಿವೆ ಆದನ್ನೆ ಕಾರಣ ನೀಡಿ ಭಾರತ ಮತ್ತೊಮ್ಮೆ ಮಾತುಕತೆ ರದ್ದು ಮಾಡುವ ಮೂಲಕ ಮತ್ತೊಂದು ಅವಕಾಶವನ್ನು ಕೈ ತಪ್ಪಿಸಿಕೊಂಡಿದೆ, ಇದರಿಂದ ಪಾಕಿಸ್ತಾನಕ್ಕೆ ತೀವ್ರ ಬೇಸರ ಉಂಟಾಗಿದೆ ಎಂದು ಪಾಕ್ ಸರ್ಕಾರ ವಣ ಪ್ರತಿಷ್ಠೆ ತೊರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
